Scodwes Mahila Souharda Sahakari Limited

Scodwes Mahila Souharda Sahakari Limited SCODWES Mahila Souharda Sahakari Limited

ಇಂದು ನಮ್ಮ ಸಹಕಾರಿಯ ಪ್ರಾರಂಭದ ದಿನದ ಅಂಗವಾಗಿ ಸಹಕಾರಿಯ ಕಚೇರಿಯಲ್ಲಿ ವರಮಹಾಲಕ್ಷಿ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಾ...
21/08/2026

ಇಂದು ನಮ್ಮ ಸಹಕಾರಿಯ ಪ್ರಾರಂಭದ ದಿನದ ಅಂಗವಾಗಿ ಸಹಕಾರಿಯ ಕಚೇರಿಯಲ್ಲಿ ವರಮಹಾಲಕ್ಷಿ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎನ್ ರವಿ ಉಡಿ ತುಂಬಿ, ಅರಿಶಿಣ ಕುಂಕುಮ ನೀಡಿ, ಬಾಗಿನ ಅರ್ಪಿಸಿದರು.

ಸ್ಕೋಡ್ ವೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು,ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷರು, ನಮ್ಮ ಸಹಕಾರಿಯ ಪ್ರಾರಂಭಕ್ಕೆ ಕಾರಣೀಕರ್ತರು ಹಾಗು ತಮ್...
16/08/2026

ಸ್ಕೋಡ್ ವೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು,ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷರು, ನಮ್ಮ ಸಹಕಾರಿಯ ಪ್ರಾರಂಭಕ್ಕೆ ಕಾರಣೀಕರ್ತರು ಹಾಗು ತಮ್ಮ ಸಾಮಾಜಿಕ ಕಾರ್ಯಗಳಿಂದ ದೇಶ ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳಿಗೆ ಭಾಜನರಾದವರು, ಯುವಜನರು ಮತ್ತು ಲಕ್ಷಾಂತರ ಜನರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿರುವ ಡಾ. ವೆಂಕಟೇಶ್ ನಾಯ್ಕ ಅವರಿಗೆ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಎಲ್ಲಾ ಸದಸ್ಯರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು.
ತಾಯಿ ಮಾರಿಕಾಂಬೆ ನಿಮಗೆ ಇನ್ನಷ್ಟು ಸೇವೆ ಮಾಡಲು ಆರೋಗ್ಯ, ಆಯುಷ್ ಹಾಗೂ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಸಂಪರ್ಕ ಸಭೆ ಮತ್ತು...
28/07/2026

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಸಂಪರ್ಕ ಸಭೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿಕಟ ಪೂರ್ವ ನಿರ್ದೇಶಕರು ಹಾಗೂ ಸ್ಕೋಡ್ ವೇಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ,. ಶಿರಸಿ ಇದರ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎನ್ ರವಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ ನಂಜನಗೌಡರವರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನದಾಸ ನಾಯಕ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಹ ಅಂಕೋಲದ ಅಂಬಿಕಾ ಸೌಹಾರ್ದ ಸಹಕಾರಿಯ @ಅಧ್ಯಕ್ಷರಾದ ಶ್ರೀ ಡಿ ಎನ್ ನಾಯಕ, ಪ್ರಾಂತೀಯ ವ್ಯವಸ್ಥಾಪಕರಾದ ಶ್ರೀ ಬಸವರಾಜ ಹೊಂಗಲ್ ಉಪಸ್ಥಿತರಿದ್ದರು.

ನಮ್ಮ ಸಹಕಾರಿಯ ಅಧ್ಯಕ್ಷರು, ಸ್ಕೋಡ್ ವೇಸ್ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಮುಖ್ಯ ಹಣಕಾಸು ಅಧಿಕಾರಿಗಳು ಹಲವಾರು ಸಂಘಟನೆಗಳಲ್ಲಿ  ಸಕ್ರೀಯವಾಗಿ ...
21/04/2026

ನಮ್ಮ ಸಹಕಾರಿಯ ಅಧ್ಯಕ್ಷರು, ಸ್ಕೋಡ್ ವೇಸ್ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಮುಖ್ಯ ಹಣಕಾಸು ಅಧಿಕಾರಿಗಳು ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಶ್ರೀಮತಿ ಸರಸ್ವತಿ ಎನ್ ರವಿ ಅವರಿಗೆ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಪ್ರಾದೇಶಿಕ ವ್ಯಾಪ್ತಿಯ ಶ್ರೇಷ್ಠ ಸಹಕಾರಿಗಳಿಗೆ ಸಹಕಾರಿ ಶ್ರೇಷ್ಠತೆ ಮತ್ತು ಅರ್ಹತೆ ಪ್ರಶಸ್ತಿ ಪ್ರಧಾನ ಕ...
10/03/2026

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಪ್ರಾದೇಶಿಕ ವ್ಯಾಪ್ತಿಯ ಶ್ರೇಷ್ಠ ಸಹಕಾರಿಗಳಿಗೆ ಸಹಕಾರಿ ಶ್ರೇಷ್ಠತೆ ಮತ್ತು ಅರ್ಹತೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಮ್ಮ ಸ್ಕೋಡ್ ವೇಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಯನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎನ್ ರವಿ, ಉಪಾಧ್ಯಕ್ಷರಾದ ಶ್ರೀಮತಿ ಹೇಮಲತಾ ಚೌಗುಲೆ, ಮುಖ್ಯಕಾರ್ಯನಿರ್ವಹಕರಾದ ಶ್ರೀ ಗಣಪತಿ ನಾಯ್ಕ ಹಾಗೂ ಪ್ರಧಾನ ಕಚೇರಿ ವ್ಯವಸ್ಥಾಪಕರಾದ ಶ್ರೀಮತಿ ವಂದನಾ ಸ್ವೀಕರಿಸಿದರು. ರಾಜ್ಯದ ಹತ್ತು ವಿವಿಧ ಶ್ರೇಷ್ಠ ಸಹಕಾರಿ ಸಂಘಗಳಿಗೆ ಪ್ರಾದೇಶಿಕ ಪ್ರಶಸ್ತಿಗಳನ್ನು ಬೆಂಗಳೂರಿನ ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆ ಸಭಾಂಗಣದಲ್ಲಿ ಇಂದು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎನಸಿಡಿಸಿಯ ಶ್ರೀಮತಿ ತನೀಶಾ ಲಾಲ್, ಹರಿಪ್ರಸಾದ್, ಪ್ರಾದೇಶಿಕ ಸಹಕಾರಿ ನಿರ್ವಹಣ ಸಂಸ್ಥೆಯ ಡಾ.ಎಂ ಕಾರ್ತಿಕೇಯನ್, ವಿಜಾಪುರ ಹಾಗೂ ಬಾಗಲಕೋಟೆ ಹಾಲು ಉತ್ಪಾದಕ ಮಹಾಮಂಡಲದ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.

ಇಂದು ನಮ್ಮ ಸಹಕಾರಿಯ ಸಾಮಾಜಿಕ ಕಾರ್ಯಕ್ರಮದಡಿ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಗೆ ಸಹಕಾರಿಯಿಂದ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ನೀಡಲಾ...
08/01/2026

ಇಂದು ನಮ್ಮ ಸಹಕಾರಿಯ ಸಾಮಾಜಿಕ ಕಾರ್ಯಕ್ರಮದಡಿ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಗೆ ಸಹಕಾರಿಯಿಂದ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ನೀಡಲಾಯಿತು. ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎನ್ ರವಿ ಠಾಣೆಯ ಪಿ ಎಸ್ ಐ ಸಂತೋಷ ಕುಮಾರ್ ಅವರಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಮಾಲಿನಿ ಶ್ರೀಧರ್ ನಾಯ್ಕ, ವೀಣಾ ಮೊಗೇರ, ಭಾಗೀರತಿ ನಾಯ್ಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಗಣಪತಿ ನಾಯ್ಕ,ವ್ಯವಸ್ಥಾಪಕರಾದ ವಂದನಾ, ರಿಕವರಿ ಆಪಿಸರ್ ನಾಗರಾಜ್ ನಾಯ್ಕ,ಸಿಬ್ಬಂದಿಗಳಾದ ಸೌಮ್ಯಾ ನಾಯ್ಕ, ಕಾರ್ತಿಕ್ ಪಟಗಾರ, ಗ್ರಾಮೀಣ ಠಾಣೆಯ ಪ್ರದೀಪ್ ರೇವಣಕರ್, ದಾವುಲ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಇಂದು ಸ್ಕೋಡವೇಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಶಿರಸಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಸಹಕಾರಿ ಧ್ವಜಾರೋಹಣ ಮಾಡುವ ಮೂಲಕ ಅರ್ಥಪ...
01/01/2026

ಇಂದು ಸ್ಕೋಡವೇಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಶಿರಸಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಸಹಕಾರಿ ಧ್ವಜಾರೋಹಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಕೋಡವೇಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಸಹಕಾರಿಯ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಇನ್ನೋರ್ವ ಮುಖ್ಯ ಅಥಿತಿ ರಾಷ್ಟ್ರೀಯ ಪ್ರಶಸ್ತಿ ವಿಜೇತರು ಹಾಗೂ ಸಮಾಜ ಸೇವಕರು ಆದ ಎಸ್ ಎಸ್ ಭಟ್ ಸಹಕಾರಿಗಳ ಬೆಳವಣಿಯಲ್ಲಿ ಆರ್ಥಿಕ ಶಿಸ್ತು ಬಗ್ಗೆ ತಿಳಿಸಿದರು. ಸಹಕಾರಿಯ ಅಧ್ಯಕ್ಷರಾದ ಸರಸ್ವತಿ ಎನ್ ರವಿ ಧ್ವಜಾರೋಹಣ ಮಾಡಿ ಭಾರತದಲ್ಲಿ ಸಹಕಾರಿ ಚಳುವಳಿಯ ಯಶಸ್ಸು ಮತ್ತು ಸೌಹಾರ್ದ ದಿನಾಚರಣೆಯ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಕೋಡವೇಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ.ನಾರಾಯಣ ಹೆಗಡೆ,ಸಹಕಾರಿಯ ಉಪಾಧ್ಯಕ್ಷರಾದ ಹೇಮಲತಾ ಚೌಗುಲೆ, ಮುಖ್ಯ ಕಾರ್ಯನಿರ್ವಾಹಕರಾಡ ಗಣಪತಿ ನಾಯ್ಕ ಉಪಸ್ಥಿತರಿದ್ದರು. ಸಹಕಾರಿಯ ನಿರ್ದೇಶಕರು, ಸದಸ್ಯರು ಹಾಗೂ ಸ್ಕೋಡವೇಸ್ ಸಂಸ್ಥೆ ಮತ್ತು ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸಹಕಾರಿಯ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಅಧ್ಯಯನ ಪ್ರವಾಸದ ಮೊದಲದಿನ ಉಮ್ಮಚಗಿಯ ಶ್ರೀ ಮಾತಾ ಸೌಹಾರ್ದ ಸಹಕಾರಿ ಭೇಟಿ ನೀಡಿ ಮಾಹಿತಿ ಪಡೆಯಲಾ...
13/12/2025

ನಮ್ಮ ಸಹಕಾರಿಯ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಅಧ್ಯಯನ ಪ್ರವಾಸದ ಮೊದಲದಿನ ಉಮ್ಮಚಗಿಯ ಶ್ರೀ ಮಾತಾ ಸೌಹಾರ್ದ ಸಹಕಾರಿ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.

27/09/2025

ದಿನಾಂಕ 13.09.2025 ರಂದು ನಡೆದ ನಮ್ಮ ಸಹಕಾರಿಯ ಸಾಮಾನ್ಯ ಸಭೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರ ಮನೋರಂಜನಾ ಕಾರ್ಯಕ್ರಮಗಳು.

ನಮ್ಮ ಸಹಕಾರಿಯ ಸ್ಥಾಪನೆಯ ಹಿಂದಿನ ಶಕ್ತಿಗಳು, ಮಾರ್ಗದರ್ಶಕರು, ಹಲವು ವರ್ಷಗಳಿಂದ ನಾಡಿನ ಲಕ್ಷಾಂತರ ಬಡ, ಗ್ರಾಮೀಣ ಜನರ ಉನ್ನತಿಗೆ ಶ್ರಮಿಸುತ್ತಿರ...
16/08/2025

ನಮ್ಮ ಸಹಕಾರಿಯ ಸ್ಥಾಪನೆಯ ಹಿಂದಿನ ಶಕ್ತಿಗಳು, ಮಾರ್ಗದರ್ಶಕರು, ಹಲವು ವರ್ಷಗಳಿಂದ ನಾಡಿನ ಲಕ್ಷಾಂತರ ಬಡ, ಗ್ರಾಮೀಣ ಜನರ ಉನ್ನತಿಗೆ ಶ್ರಮಿಸುತ್ತಿರುವ ಸಾಮಾಜಿಕ ಧುರೀಣರು, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಆದ ಡಾ.ವೆಂಕಟೇಶ್ ನಾಯ್ಕ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಶುಭಾಶಯ ಕೋರುವವರು:
ಶ್ರೀಮತಿ ಸರಸ್ವತಿ ಎನ್ ರವಿ
ಅಧ್ಯಕ್ಷರು ಸ್ಕೋಡವೇಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ., ಶಿರಸಿ
ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು
ಹಾಗೂ ಸಿಬ್ಬಂದಿಗಳು

Address

Gangoli Complex, Martikoppa Main Road Sirsi
Sirsi
581402

Opening Hours

Monday 9:30am - 6:30pm
Tuesday 9:30am - 6:30pm
Wednesday 9:30am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm

Website

Alerts

Be the first to know and let us send you an email when Scodwes Mahila Souharda Sahakari Limited posts news and promotions. Your email address will not be used for any other purpose, and you can unsubscribe at any time.

Shortcuts

Share

Category