Lic - Insure & Be Secure

Lic - Insure & Be Secure Contact information, map and directions, contact form, opening hours, services, ratings, photos, videos and announcements from Lic - Insure & Be Secure, Insurance Agent, Mangalore.

11/05/2019

ಹಾಸ್ಯಕ್ಕಾಗಿ ವಿಮೆ ಸತ್ತರೆ ಮಾತ್ರ ಬರುವುದು ಬದುಕಿದ್ದರೆ ಇಲ್ಲ ಎನ್ನುವುದು ಕೆಲವರ ವಾದ ಆದರೆ ವಾಸ್ತವ ಬೇರೆ.

ಒಂದು ಕುಟುಂಬದ ಯಜಮಾನ ಆಕಸ್ಮಿಕವಾಗಿ ಮರಣಸಿದರೆ ಆ ವ್ಯಕ್ತಿಯ ದಹನದವರೆಗೂ ಆ ಕುಟುಂಬದ ಬಂದುವರ್ಗ ಸ್ನೇಹಿತರು ಇರ್ತಾರೆ. ಅಬ್ಬಬ್ಬಾ ಅಂದರೆ ಇನ್ನೆರಡು ಮೂರು ದಿನ ಇರಬಹುದು ಅಷ್ಟೇ. ಇದು ಎಲ್ಲರಿಗೂ ಗೊತ್ತಿರುವ ವಿಷಯ.
ನಂತರ ಆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಡಿಕೊಳ್ಳುವವರೆ ಜಾಸ್ತಿ. ಮಾತಾಡಿದರೆ ಎಲ್ಲಿ ಹಣದ ಸಹಾಯ ಕೇಳ್ತಾರೋ ಅಂತ ದೂರ ಹೋಗುವವರೆ ಜಾಸ್ತಿ. ಅಂತಹ ಸಮಯದಲ್ಲಿ ಆ ಕುಟುಂಬದ ಸಹಾಯಕ್ಕೆ ದಾವಿಸುವವರೆ ವಿಮಾಪ್ರತಿನಿಧಿಗಳು.
ವಿಮೆ ಅಂದರೆ ಸಾವಿನ ನಂತರ ಬರುವ ಹಣ ಅಲ್ಲ.
ಕುಟುಂಬದ ಯಜಮಾನ ಇರುವಾಗ ಆ ಕುಟುಂಬದ ಜೀವನ ಶೈಲಿ ಯಾವ ರೀತಿ ಇತ್ತೋ ಆ ಮನೆಯ ಯಜಮಾನ ಮರಣಿಸಿದ ನಂತರವೂ ಅದೇ ಜೀವನ ಶೈಲಿಯಿಂದ ಜೀವನ ನಡೆಸಲು ಸಹಾಯಕ್ಕೆ ಬರುವುದೇ ವಿಮೆ.
ಇಂತಹ ಒಂದು ಸೂಕ್ಷ್ಮ ವಿಷಯ ( ವಿಮಾ ವಿಷಯವನ್ನು) ಮನಸ್ಸಿಗೆ ನಾಟುವಂತೆ ಪ್ರಚುರ ಪಡಿಸುವವರೆ ವಿಮಾಪ್ರತಿನಿಧಿಗಳು.
*Life is certain but death is uncertain.*
ಮರಣಿಸಿದರೆ ಮಾತ್ರ ವಿಮೆಹಣ ಬರುತ್ತೆ ಅನ್ನೋದು ತಪ್ಪು ಕಲ್ಪನೆ.
ಬದುಕಿದ್ದಾಗಲೂ maturity ಹಣ ಬಂದು ಮಕ್ಕಳ ವಿದ್ಯಾಭ್ಯಾಸ ಮದುವೆ ಮುಂತಾದ ಕಾರ್ಯಗಳಿಗೂ ಆರ್ಥಿಕ ಸಹಾಯ ಪಡೆದಂತ ಕೋಟ್ಯಂತರ ಕುಟುಂಬಗಳು ಇವೆ.

*ವಿಮೆ ಎನ್ನುವುದು ನೊಂದಿರುವ ಕುಟುಂಬಕ್ಕೆ ನೆರವಾಗುವ ಪರ್ಯಾಯ ಆರ್ಥಿಕ ಮೂಲ.*

13/09/2018
28/08/2018
28/08/2018

ಭಾರತದಲ್ಲಿ ವಿಮೆ

ಬಂಧುಗಳೇ
ಈ ವಿಷಯಗಳನ್ನು ಓದಿ ಅರ್ಥೈಸಿಕೊಳ್ಳಿ ನಿಮ್ಮ ಜೀವನ ಉಜ್ವಲಗೊಳಿಸಿ ಮತ್ತು ಇನ್ನೊಬ್ಬರ ಜೀವನವನ್ನೂ ಸಹ ಬೆಳಗಿಸಿ

1) ನಾವು ನಮ್ಮ ಮಕ್ಕಳಿಗಾಗಿ
ಅವರ ಮದುವುಗೆಂದು ಚಿನ್ನ ಖರೀದಿಸುತ್ತೇವೆ ಆದರೆ ಮಕ್ಕಳ ವಿಮೆ ಖರಿದಿಸಲ್ಲ

2) ಒಬ್ಬ ವಿಮಾ ಪ್ರತಿನಿಧಿ (ಏಜೆಂಟ್) ಕಂಡರೆ ಭಯ ಪಡುತ್ತೇವೆ ಆದರೆ ಅವರು ನಮ್ಮ ಜೀವನ ನಮ್ಮನ್ನು ನಂಬಿದವರ ರಕ್ಷಕರನ್ನಾಗಿ ನೋಡುವುದಿಲ್ಲ

3) ಭಾರತೀಯ ಜನಸಂಖ್ಯೆಯಲ್ಲಿ ಅಂದರೆ ಸುಮಾರು 130 ಕೋಟಿ ಜನರಲ್ಲಿ ಕೇವಲ 20 ಕೋಟಿ ಜನ ಮಾತ್ರ ವಿಮೆ ಮಾಡಿಸಿದ್ದಾರೆ

4) ಸುಮಾರು 10ಸಾವಿರ ಬೆಲೆಬಾಳುವ ಮೊಬೈಲ್‌ಗಳಿಗಾಗಿ ನಾವು ಸ್ಕ್ರೀನ ಗಾರ್ಡ,ಮತ್ತು ಕವರಗಳನ್ನ ಹಾಕುತ್ತೇವೆ ಆದರೆ 10 ಕೋಟಿಗೂ ಅಧಿಕ ಬೆಲೆಬಾಳುವ ನಮ್ಮ ಜೀವಕ್ಕಾಗಿ ವಿಮೆ ಮಾಡಿಸಲು ಯೋಚಿಸುತ್ತೇವೆ

5) ಅಪರಿಚಿತ ವ್ಯಕ್ತಿಗೆ ನಮ್ಮ ಮನೆ ಮಗಳನ್ನು ಕೊಟ್ಟು ಮದುವೆ ಮಾಡುತ್ತೇವೆ ಆದರೆ ಪರಿಚಿತ ವ್ಯಕ್ತಿಯೊಬ್ಬ ವಿಮೆ ಬಗ್ಗೆ ಮಾತನಾಡಿದರೆ ಅದರ ಬಗ್ಗೆ ಅತೀಯಾಗಿ ಯೋಚಿಸುತ್ತೇವೆ

6) ಗುಡಿಗಳಲ್ಲಿ ನಮ್ಮ ಪಾದರಕ್ಷೆಗಳು ಕಳುವಾಗದಿರಲಿ ಎಂದು 5ರೂಪಾಯಿ ಕೊಟ್ಟು ಜೋಪಾನವಾಗಿ ಇರಿಸುತ್ತೇವೆ
ಆದರೆ ಅತ್ಯಮೂಲ್ಯವಾದ ನಮ್ಮ ಜೀವನಕ್ಕಾಗಿ ವಿಮೆ ಮಾಡಿಸಲು ಎಂದೂ ಯೋಚಿಸುವುದಿಲ್ಲ
*ನಮ್ಮ ಜೀವನ ಪಾದರಕ್ಷೆಗಳಿಗಿಂತ ಕಡೆಯಾಯಿತೇ*

7ಮಾಟಮಂತ್ರ ಮಾಡುವ ಬಾಬಾಗಳನ್ನು ನಂಬುವ ನಾವು ತರ್ಕಯುತವಾಗಿ ನಮ್ಮ ಜೀವನದ ಸುಗಮ ದಾರಿ ತೋರಿಸುವ ಎಜೆಂಟರನ್ನು ನಾವು ನಂಬುವುದಿಲ್ಲ

8ಕರೆಂಟ್ ಇಲ್ಲದಾಗ ಬೆಳಕಿಗಾಗಿ ಇನವರ್ಟರ್ ಕೂಡಿಸುತ್ತೇವೆ ಆದರೆ ನಾವು ನಮ್ನ ಸಂಸಾರದ ಬೆಳಕು ನಾವಿಲ್ಲದಿದ್ದಾಗ ಬೆಳಕಾಗಿ ವಿಮೆ ನಮ್ಮ ಸಂಸಾರಕ್ಕೆ ಸಹಾಯವಾಗುತ್ತದೆ

9) ನಾವು ಮೃತರಾದರೆ ನಮಗೆ ಅದೇ ಕೊನೆ ದಿನ ಆದರೆ ನನ್ನ ಸಂಸಾರಕ್ಕೆ ಮರುದಿನವೂ ಇರುತ್ತದೆ ಅವರನ್ನು ಮುಂದಿನದಿನ ಬದುಕಿಸುವುದೇ ನೀವು ಮಾಡಿಸಿದ ವಿಮೆ

10) ನಮ್ಮ ಮೊಬೈಲ್ ಬ್ಯಾಲೆನ್ಸ್ ಎಷ್ಟು ಉಳಿದಿದೆ ನಮ್ಮ ಬ್ಯಾಂಕ ಎಟಿಎಮ್ ಕಾರ್ಡ ಬ್ಯಾಲೆನ್ಸ್ ಎಷ್ಟಿದೆ ಎಂದು ನಾವು ಅರಿತಿರುತ್ತೇವೆ ಆದರೆ ಜೀವನದ ಕಾರ್ಡನಲ್ಲಿ ಉಳಿದಿರುವ ಬ್ಯಾಲೆನ್ಸ್ ನಮಗೆ ತಿಳಿಯುತ್ತಾ?

ನಿಮ್ಮ ಜೀವನದ ಕಾರ್ಡ್ ರಿಚಾರ್ಜ್ ಮಾಡುವ ವಿಧಾನ ಈ ವಿಮೆ.

Address

Mangalore

Website

Alerts

Be the first to know and let us send you an email when Lic - Insure & Be Secure posts news and promotions. Your email address will not be used for any other purpose, and you can unsubscribe at any time.

Shortcuts

Share