S K Goldsmith's Industrial Co-Operative Society Ltd Mangalore

S K Goldsmith's Industrial Co-Operative Society Ltd Mangalore Deposit your money for good interest rate
and also take loans like Personal loans, Vehicle Loans,

16/11/2025

ನವೀಕೃತ " ವಿಶ್ವಸೌಧ" ಕಟ್ಟಡ ಉದ್ಧಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ

03/11/2025
ಕ್ರೀಡೆ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಅತ್ಯಗತ್ಯ: ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸುಕನ್ಯಾ ಜಗದೀಶ್ ಆಚಾರ್ಯ ಎಸ್.ಕೆ.ಗೋಲ್ಡ್ ಸ್ಮಿತ್...
31/12/2024

ಕ್ರೀಡೆ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಅತ್ಯಗತ್ಯ: ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸುಕನ್ಯಾ ಜಗದೀಶ್ ಆಚಾರ್ಯ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಮಂಗಳೂರು. ಇದರ ವಜ್ರ ಮಹೋತ್ಸವದ ಪ್ರಯುಕ್ತ ಸದಸ್ಯರಿಗೆ ಮತ್ತು ಸಿಬ್ಬಂದಿಯವರಿಗೆ ಕ್ರೀಡೋತ್ಸವ 2024 ದಿನಾಂಕ 29.12.2024ರಂದು ಮಂಗಳಾ ಕ್ರೀಡಾಂಗಣದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ , ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸುಕನ್ಯಾ ಜಗದೀಶ್ ಆಚಾರ್ಯ ಇವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಪಾರಿವಾಳ ಹಾರಿಸುದರೊಂದಿಗೆ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನ ಸದಸ್ಯರಾದ ಶ್ರೀಮತಿ ಸಂಧ್ಯಾ ಮೋಹನ್ ಆಚಾರ್ಯ ಮಾತನಾಡಿ ಒತ್ತಡದ ಜೀವನವನ್ನು ನಿವಾರಿಸಲು ಕ್ರೀಡೆ ಅಗತ್ಯ ಹಾಗೂ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ರಥ ಬೀದಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಜಗದೀಶ್ ಆಚಾರ್ಯ ಸಿದ್ದಕಟ್ಟೆ ಶುಭ ಹಾರೈಸಿದರು ಉಪಾಧ್ಯಕ್ಷರಾದ ಶ್ರೀ ಎ ಆನಂದ ಆಚಾರ್ಯ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಕೃಷ್ಣಾಪುರ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಶ್ರೀ ಕೆ. ಯಜ್ಞೇಶ್ವರ ಆಚಾರ್ಯ, ಶ್ರೀ ವೈ. ವಿ. ವಿಶ್ವಜ್ಞಮೂರ್ತಿ, ಶ್ರೀ ವಿ. ಜಯ ಆಚಾರ್, ಶ್ರೀ ಕೆ. ಶಶಿಕಾಂತ ಆಚಾರ್ಯ, ಶ್ರೀಮತಿ ರೋಹಿಣಿ ಎಂ. ಪಿ., ಶ್ರೀ ರಮೇಶ್ ರಾವ್ ಯು., ಶ್ರೀ ಮಲ್ಲಪ್ಪ ಪತ್ತಾರ್, ಶ್ರೀ ಕೆ.ಪ್ರಕಾಶ ಆಚಾರ್ಯ, ಶ್ರೀ ಮಂಜುನಾಥ ಆಚಾರ್ಯ, ಶ್ರೀ ಚಂದ್ರಶೇಖರ ಎ. ಎಸ್. ಮತ್ತು ಸಂಸ್ಥೆಯ ಸದಸ್ಯರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎ ಆನಂದ ಆಚಾರ್ಯ ಸ್ವಾಗತಿಸಿದರು ನಿರ್ದೇಶಕರಾದ ಶ್ರೀವೈ ವಿ ವಿಶ್ವಜ್ಞ ಮೂರ್ತಿ ಪ್ರಾರ್ಥನೆ ಗೈದರು ನಿರ್ದೇಶಕರಾದ ಶ್ರೀ ಕೆ ಪ್ರಕಾಶ್ ಆಚಾರ್ಯ ವಂದನಾರ್ಪಣೆಗೈದರು ಶ್ರೀಕಾಂತ್ ಆಚಾರ್ಯ ಮತ್ತು ಶ್ರೀಮತಿ ಉಷಾ ಮನೋಜ್ ನಿರೂಪಣೆಗೈದರು.
ಸಂಸ್ಥೆಯ ಸದಸ್ಯರು ಮತ್ತು ಸಿಬ್ಬಂದಿಯವರಿಗೆ 100 ಮೀಟರ್ ಓಟ, 200 ಮೀಟರ್ ಓಟ, 400 ಮೀಟರ್ ಓಟ, 400 ಮೀಟರ್ ರಿಲೇ, 400 ಮೀಟರ್ ವೇಗದ ನಡಿಗೆ ಮತ್ತು ಹಗ್ಗ ಜಗ್ಗಾಟ ಏರ್ಪಡಿಸಿ ವಿಜೇತರಿಗೆ ಪದಕ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು ಒಂದರಿಂದ ಐದನೇ ತರಗತಿಯ ಸದಸ್ಯರ ಮತ್ತು ಸಿಬ್ಬಂದಿಯವರ ಮಕ್ಕಳಿಗೆ 50 ಮೀಟರ್ ಓಟ, ಕಪ್ಪೆ ಜಿಗಿತ ಮತ್ತು ಬಾಲ್ ಎಸೆತ ಸ್ಪರ್ಧೆ ಏರ್ಪಡಿಸಲಾಯಿತು.

ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಸಾಧಿಸಿದ ಸರ್ವಾಂಗಿಣ ಸಾಧನೆಯನ್ನು ಪರಿಗಣಿಸಿ ದಿನಾಂಕ 16-11...
25/11/2024

ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಸಾಧಿಸಿದ ಸರ್ವಾಂಗಿಣ ಸಾಧನೆಯನ್ನು ಪರಿಗಣಿಸಿ ದಿನಾಂಕ 16-11.2024ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜರಗಿದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾಕ್ಟರ್ ಎಂ. ಎನ್. ರಾಜೇಂದ್ರ ಕುಮಾರ್, ಸಹಕಾರ ಸಚಿವರಾದ ಶ್ರೀ ಕೆ. ಎನ್. ರಾಜಣ್ಣ, ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಜಿ. ಟಿ. ದೇವೇಗೌಡ ಮತ್ತು ಸನ್ಮಾನ್ಯ ಶಾಸಕರು ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ ಇವರು ಉತ್ತಮ ವಿವಿಧೋದ್ದೇಶ ಸಹಕಾರ ಸಂಘ ಪ್ರಶಸ್ತಿ ಯನ್ನು ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಇವರಿಗೆ ನೀಡಿ ಗೌರವಿಸಿರುವುದು.

ವಿಶ್ವ ಬ್ರಾಹ್ಮಣ ಸೇವಾ ಸಂಘ ರಿ ಬೊಳುವಾರು, ವಿಶ್ವ ಕರ್ಮ ಯುವ ಸಮಾಜ ರಿ ಬೊಳುವಾರು, ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಹಾಗೂ ಎಸ್.ಕೆ.ಗೋಲ್ಡ್ ...
27/09/2024

ವಿಶ್ವ ಬ್ರಾಹ್ಮಣ ಸೇವಾ ಸಂಘ ರಿ ಬೊಳುವಾರು, ವಿಶ್ವ ಕರ್ಮ ಯುವ ಸಮಾಜ ರಿ ಬೊಳುವಾರು, ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಹಾಗೂ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ವಿಶ್ವಕರ್ಮ ಸಭಾ ಭವನದಲ್ಲಿ ದಿನಾಂಕ 22.9.2024ರಂದು ಜರಗಿದ ರಕ್ತದಾನ ಶಿಬಿರ, ನೇತ್ರ ತಪಾಸಣೆ ಹಾಗೂ ಹೃದಯ ತಪಾಸಣೆ ಜರಗಿತು.lಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನವ್ಯವಸ್ಥಾಪಕರು ನಡೆಸಿಕೊಟ್ಟರು.ವೇದಿಕೆಯಲ್ಲಿ ಶ್ರೀಧರ ಆಚಾರ್ಯ ಕೊಕ್ಕಡ, ಡಾ.ಶ್ರೀಪತಿ ರಾವ್, ಡಾ .ನರಸಿಂಹ ಪೈ,ಪ್ರಕಾಶ ಆಚಾರ್ಯ, ಇಂದಿರಾ ಪುರುಷೋತ್ತಮ್,ಉಪಾಧ್ಯಕ್ಷರಾದ ಎ.ಆನಂದ ಆಚಾರ್ಯ ,ನಿರ್ದೇಶಕರಾದ ವೈ.ವಿ.ವಿಶ್ವಜ್ಞ ಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಈ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ 36 ಯೂನಿಟ್ ರಕ್ತ ಸಂಗ್ರಹಣೆಯಾಗಿದ್ದು, 140 ಸದಸ್ಯರು ಇಸಿಜಿ ಹಾಗೂ 135 ಸದಸ್ಯರು ನೇತ್ರ ತಪಾಸಣೆಯ ಪ್ರಯೋಜನ ಪಡೆದುಕೊಂಡರು.

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ದಿನಾಂಕ 10...
13/09/2024

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ದಿನಾಂಕ 10.09.2024 ರಂದು ಸ್ನೇಹ ಭಾರತಿ ವಿದ್ಯಾ ಸಂಸ್ಥೆಯ "ನಮ್ಮ ಹಿರಿಯರ ಮನೆ", ಗುಡ್ಡೆ ಅಂಗಡಿ, ಅರಳಾ, ಬಂಟ್ವಾಳ ತಾಲೂಕಿನ ವೃದ್ಧಾಶ್ರಮಕ್ಕೆ ಭೇಟಿ ನೀಡಿ 60 ವರ್ಷದಾಟಿದ ವೃದ್ದರಿಗೆ ನಮ್ಮ ಸಂಸ್ಥೆಯ ವತಿಯಿಂದ 50 ಬೆಡ್‍ಶೀಟನ್ನು ನೀಡಲಾಯಿತು. ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ವೈ.ವಿ. ವಿಶ್ವಜ್ಞಮೂರ್ತಿ, ಶ್ರೀಮತಿ ರೋಹಿಣಿ ಎಂ ಪಿ, ಶ್ರೀ ಯು ರಮೇಶ್ ರಾವ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ವರ ಹಾಗೂ ಸಿಬ್ಬಂದಿ ಶ್ರೀ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.ಸ್ನೇಹಭಾರತಿಯ "ನಮ್ಮ ಹಿರಿಯರ ಮನೆ" ಆಶ್ರಮದ ನಿರ್ವಾಹಕರಾದ ಶ್ರೀ ರಾಮೆ ಗೌಡ ವಿಜಾಪುರ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.

ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ದಿನಾಂಕ 05.9.2024 ಶಿಕ್ಷಕರ ದಿನಾಚರಣೆ ಯಂದು ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪ್...
08/09/2024

ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ದಿನಾಂಕ 05.9.2024 ಶಿಕ್ಷಕರ ದಿನಾಚರಣೆ ಯಂದು ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪ್. ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ 34 ವರ್ಷ ಬೆಸೆಂಟ್ ಪ್ರೌಢಶಾಲೆ ಮಂಗಳೂರಿನಲ್ಲಿ ಶಿಕ್ಷಕಿಯಾಗಿ ಸೇವೆಗೈದ ಶ್ರೀಮತಿ ರತ್ನಾವತಿ ಜೆ ಬೈಕಾಡಿ ಹಾಗೂ 34 ವರ್ಷದಿಂದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೈಯುತ್ತಿರುವ ಹಾಗೂ 2023ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿರುವ, ಪ್ರಸ್ತುತ ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಗೈಯುತ್ತಿರುವ ಶ್ರೀ ಗಣೇಶ್ ಆಚಾರ್ಯ ಹಾಗೂ 34 ವರ್ಷ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿರುವ ಶ್ರೀ ಹರಿನಾರಾಯಣ ಇವರನ್ನು ಗೌರವಿಸಲಾಯಿತು.

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ  2023-2024 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ:25-...
26/08/2024

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2023-2024 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ:25-08-2024 ರಂದು ಶ್ರೀ ಪಿ. ಉಪೇಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಉರ್ವಚರ್ಚ್ ಸೆಂಟಿನರಿ ಹಾಲ್, ಲೇಡಿಹಿಲ್ ಮಂಗಳೂರು ಇದರ ಸಭಾಭವನದಲ್ಲಿ ಜರಗಿತು. 2023-2024ನೇ ಸಾಲಿನಲ್ಲಿ ರೂ.4,95,81,869.97/- ನಿವ್ವಳ ಲಾಭಗಳಿಸಿದ್ದು, ರೂ.21,706 ಲಕ್ಷ ಠೇವಣಿ ಇದ್ದು, ರೂ.18994.64 ಲಕ್ಷ ಸದಸ್ಯರ ಹೊರಬಾಕಿ ಇದ್ದು, ಒಟ್ಟು ವ್ಯವಹಾರವು ರೂ.1,009.21ಕೋಟಿ ನಡೆಸಿದ್ದು, ಸೊಸೈಟಿಯ ದುಡಿಯುವ ಬಂಡವಾಳ ರೂ.24,775.37 ಲಕ್ಷ ಇರುತ್ತದೆ. ವಜ್ರಮಹೋತ್ಸವ ವರ್ಷದ ಪ್ರಯುಕ್ತ 2023-24 ಸಾಲಿಗೆ ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಡು ಪಾವತಿಗೆ ಮಂಜೂರಾತಿ ಪಡೆಯಲಾಯಿತು.

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಬೆಳ್ಳಂಪಳ್...
13/08/2024

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಪ್ರಯುಕ್ತ ಬೆಳ್ಳಂಪಳ್ಳಿಯ ಜೈ ಹಿಂದ್‍ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಅಗತ್ಯ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ದಿನಾಂಕ 31.07.2024ರಂದು ನೆರವೇರಿತು.

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.., ಮಂಗಳೂರು. ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024  ಪ್ರಯುಕ್ತ ಹೊಸಬೆಳ...
13/08/2024

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.., ಮಂಗಳೂರು. ಇದರ ವಜ್ರಮಹೋತ್ಸವ ಸಂಭ್ರಮಾಚರಣೆ 2024 ಪ್ರಯುಕ್ತ ಹೊಸಬೆಳಕು ಸೇವಾ ಟ್ರಸ್ಟ್ ಬೈಲೂರು ಇದರ ಆಶ್ರಮ ವಾಸಿಗಳಿಗೆ ನೆರವು ಕಾರ್ಯಕ್ರಮ ಇಂದು ಹೊಸಬೆಳಕು ಸೇವಾ ಟ್ರಸ್ಟ್ ಇದರ ಸಭಾಂಗಣದಲ್ಲಿ ದಿ. 20/7/2024 ರಂದು ನೆರವೇರಿತು. ಸಮಾರಂಭದ ಅಧ್ಯಕರಾದ ಶ್ರೀ ಪಿ.ಉಪೇಂದ್ರ ಆಚಾರ್ಯರು 1300 ವ್ಯಾಟ್ಸ್ ಪ್ರಿಸ್ಟೇಜ್ ಮಿಕ್ಸಿ, 25 ನೀಲ್ ಕಮಲ್ ಚೇಯರ್, 25 ತಲೆದಿಂಬು, 50ಕಿ.ಲೋ. ಅಕ್ಕಿ ಮತ್ತು ಅಡುಗೆ ಸಾಮಾನು ಹಸ್ತಾಂತರಿಸಿ, ಇವತ್ತಿನ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳಿಗೆ ನೆರವು ನೀಡಿರುವುದು ಸಂಸ್ಥೆಯ ಸ್ಥಾಪಕಧ್ಯಕ್ಷರಾದ ದಿವಂಗತ ಪಾಲ್ಕೆ ಬಾಬುರಾಯ ಆಚಾರ್ ಇವರ ಆತ್ಮಕ್ಕೆ ಖುಷಿ ಆಗಿರಬಹುದು ಎಂದು ಹೇಳಿದರು.

Address

Mangalore
575006

Opening Hours

Monday 9:30am - 5:30pm
Tuesday 9:30am - 5:30pm
Wednesday 9:30am - 5:30pm
Thursday 9:30am - 5:30pm
Friday 9:30am - 5:30pm
Saturday 9:30am - 2pm

Telephone

+91 824 245 1320

Alerts

Be the first to know and let us send you an email when S K Goldsmith's Industrial Co-Operative Society Ltd Mangalore posts news and promotions. Your email address will not be used for any other purpose, and you can unsubscribe at any time.

Contact The Business

Send a message to S K Goldsmith's Industrial Co-Operative Society Ltd Mangalore:

Share

Category