SMS Enterprises

SMS Enterprises We are serving All type of Insurance Like, LIC, Vehicle Insurance, Building Insurance, Health Insura

ಹೊಸ ಟ್ರಾಫಿಕ್​ ರೂಲ್ಸ್​ ಬ್ರೇಕ್ ಮಾಡಲು ನೀವು ತುಂಬಾ ಯೋಚಿಸುತ್ತಿರಾ.  ಯಾಕೇಂದ್ರೆ  .....ನವದೆಹಲಿ: ಕಾನೂನು ಹೇಗೇ ಇದ್ದರೂ, ದಂಡ ಎಷ್ಟೇ ಇದ್ದ...
19/01/2021

ಹೊಸ ಟ್ರಾಫಿಕ್​ ರೂಲ್ಸ್​ ಬ್ರೇಕ್ ಮಾಡಲು ನೀವು ತುಂಬಾ ಯೋಚಿಸುತ್ತಿರಾ. ಯಾಕೇಂದ್ರೆ .....

ನವದೆಹಲಿ: ಕಾನೂನು ಹೇಗೇ ಇದ್ದರೂ, ದಂಡ ಎಷ್ಟೇ ಇದ್ದರೂ ವಾಹನ ಸವಾರರು ಒಮ್ಮೊಮ್ಮೆ ಸರಾಗವಾಗಿ ಸಂಚಾರ ನಿಯಮ ಉಲ್ಲಂಘಿಸಿ ಬಿಡುತ್ತಾರೆ. ಆದರೆ ಇದೀಗ ಟ್ರಾಫಿಕ್​ ರೂಲ್ಸ್​ ಪಾಲನೆ ಮಾಡಿಸುವ ನಿಟ್ಟಿನಲ್ಲಿ ಹೀಗೊಂದು ಚಿಂತನೆ ನಡೆದಿದ್ದು, ಒಂದು ವೇಳೆ ಇದೇನಾದರೂ ಜಾರಿಯಾದರೆ ಬಹಳಷ್ಟು ಮಂದಿ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವುದು ಕಡಿಮೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎಐ) ನೇಮಿಸಿರುವ ಸಮಿತಿಯೊಂದು ಇಂಥದ್ದೊಂದು ಪ್ರಸ್ತಾವ ಇರಿಸಿದೆ. ಟ್ರಾಫಿಕ್​ ರೂಲ್ಸ್ ಉಲ್ಲಂಘಿಸುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇದು ಪ್ರತ್ಯೇಕ ವಿಮಾ ಪ್ರೀಮಿಯಂ ಅಳವಡಿಸುವ ಬಗ್ಗೆ ಪ್ರಸ್ತಾವನೆ ಇರಿಸಿದೆ. ಅದಕ್ಕಾಗಿ ಟ್ರಾಫಿಕ್​ ಉಲ್ಲಂಘನೆ ಪ್ರಕರಣಗಳನ್ನು ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಜತೆ ಲಿಂಕ್ ಮಾಡುವ ಸಲಹೆಯನ್ನು ನೀಡಿದೆ.

ಇದಕ್ಕೆ ಟ್ರಾಫಿಕ್​ ವಯೊಲೇಷನ್​ ಪ್ರೀಮಿಯಂ (ಟಿವಿಪಿ) ಎಂದು ಹೆಸರಿಡಲಾಗಿದ್ದು, ಈಗಾಗಲೇ ಇರುವ ಓನ್ ಡ್ಯಾಮೇಜ್​ ಇನ್ಶೂರೆನ್ಸ್​, ಥರ್ಡ್​ ಪಾರ್ಟಿ ಇನ್ಶೂರೆನ್ಸ್, ಅಡಿಷನಲ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹಾಗೂ ಕಂಪಲ್ಸರಿ ಪರ್ಸನಲ್​ ಆಯಕ್ಸಿಡೆಂಟ್ ಪ್ರೀಮಿಯಂ ಜತೆ ಇದನ್ನೂ ಸೇರಿಸುವಂತೆ ಪ್ರಸ್ತಾವನೆ ಇಡಲಾಗಿದೆ.

ಈ ಟಿವಿಪಿ ಹೊಸ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಆ ಬಳಿಕದ ನವೀಕರಣ ವೇಳೆ ಅನ್ವಯಿಸುತ್ತದೆ. ಅಂದರೆ ಮುಂದೆ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಸಲ ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಲಾಗಿದೆ ಎಂಬುದರ ಮೇಲೆ ಇದರ ಪ್ರೀಮಿಯಂ ನಿರ್ಧರಿಸಲಾಗುತ್ತದೆ. ಅರ್ಥಾತ್ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸಲ ಸಂಚಾರ ನಿಯಮ ಉಲ್ಲಂಘಿಸಿದ್ದರೆ ಹೆಚ್ಚು ಟಿವಿಪಿ ವಿಧಿಸಲಾಗುತ್ತದೆ.

ಈ ಮೂಲಕ ಇನ್ಶೂರೆನ್ಸ್ ಇನ್​ಫಾರ್ಮೇಷನ್​ ಬ್ಯೂರೋ ಆಫ್ ಇಂಡಿಯಾ(ಐಐಬಿ) ದೇಶದ ಎಲ್ಲ ಸಂಚಾರ ಇಲಾಖೆ ಹಾಗೂ ನ್ಯಾಷನಲ್ ಇನ್​ಫಾರ್ಮ್ಯಾಟಿಕ್ಸ್ ಸೆಂಟರ್​ ಜತೆ ಸಂಪರ್ಕದಲ್ಲಿದ್ದು ದೇಶದಲ್ಲಿನ ಒಟ್ಟಾರೆ ಸಂಚಾರ ನಿಯಮ ಉಲ್ಲಂಘನೆ ಅಂಕಿ-ಅಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದಂಡ ಹಾಕುವ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಭವಿಷ್ಯದಲ್ಲಿ ವಾಹನ ಮಾಲೀಕರು ಜನರಲ್ ಇನ್ಶೂರೆನ್ಸ್​ ಕ್ಲೇಮ್​ ಮಾಡಿಕೊಳ್ಳುವಾಗ ಈ ಟಿವಿಪಿಯನ್ನೂ ಪರಿಗಣಿಸಲಾಗುವುದು. ಇಂಥದ್ದೊಂದು ಕರಡು ಸದ್ಯ ಸಲ್ಲಿಕೆಯಾಗಿದ್ದು, ಪರಿಶೀಲನೆಯಲ್ಲಿದೆ. (ಏಜೆನ್ಸೀಸ್​)

09/01/2021

Star Health Insurance
24/12/2020

Star Health Insurance

"All Power Is Within You; You Can Do Anything And Everything."  - Swami Vivekananda
11/11/2020

"All Power Is Within You; You Can Do Anything And Everything." - Swami Vivekananda

04/08/2020

Health Insurance Is Wealth Insurance

18/07/2020
Hi Friends, According to IRDA all insurance  companies are coming out with short term Covid protection Policies from 3.5...
17/07/2020

Hi Friends, According to IRDA all insurance companies are coming out with short term Covid protection Policies from 3.5 Months to 9.5 months policy with sum assured 50,000 to 5 lakhs coverage for individual. There will be no renewal and if required again the customer has to take this product. Our product Family Health Optima Restore which can be renewed for life time has cashless coverage of all diseases & treatments including Covid - 19. Connect me to your friends & relatives in all over India. Contact me @ 9141866866. Assuring you my best services.
*Health Is Wealth*

10/06/2020

ಕೊನೆಯ ಅವಕಾಶ! ಜೂನ್ 30 ರ ಮೊದಲು PAN-Aadhaar ಲಿಂಕ್ ಮಾಡಿ, ಇಲ್ಲದಿದ್ದರೆ...

ಪ್ಯಾನ್-ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕ ಹತ್ತಿರ ಬರುತ್ತಿದೆ. ನೀವು ಇನ್ನೂ ಅವುಗಳನ್ನು ಲಿಂಕ್ ಮಾಡದಿದ್ದರೆ ನಿಮಗಾಗಿ ಇದು ಕೊನೆಯ ಅವಕಾಶವಾಗಿದೆ. ಜೂನ್ 30 ರ ನಂತರ ಪ್ಯಾನ್-ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ. 30 ಜೂನ್ 2020 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದ್ದರಿಂದ ಜೂನ್ 30 ರವರೆಗೆ ಕಾಯಬೇಡಿ. ಎಕೆಂದರೆ ಪ್ಯಾನ್ ಕಾರ್ಡ್ ಅನ್ನು ಜೂನ್ 30 ರೊಳಗೆ ಲಿಂಕ್ ಮಾಡದಿದ್ದರೆ ಅದು ನಿಷ್ಪ್ರಯೋಜಕವಾಗುತ್ತದೆ.

ಕರೋನಾವೈರಸ್‌ನಿಂದಾಗಿ, ಪ್ಯಾನ್-ಆಧಾರ್ ಲಿಂಕ್ (PAN-Aadhaar Link) ಮಾಡುವ ಗಡುವನ್ನು ವಿಸ್ತರಿಸಲಾಯಿತು.

ಲಿಂಕ್‌ನ ಕೊನೆಯ ದಿನಾಂಕವನ್ನು ಹಣಕಾಸು ಸಚಿವಾಲಯವು ಮಾರ್ಚ್ 31, 2020 ರಿಂದ ಈಗ 30 ಜೂನ್ 2020ರವರೆಗೆ ವಿಸ್ತರಿಸಿದೆ. ಯಾವುದೇ ಸಂದರ್ಭದಲ್ಲಿ 30 ಜೂನ್ 2020 ರೊಳಗೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಸಂಖ್ಯೆ ನಿಷ್ಪ್ರಯೋಜಕವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದಾಯ ತೆರಿಗೆ ಇಲಾಖೆ ಕೂಡ ಅದನ್ನು ಅಮಾನ್ಯಗೊಳಿಸುತ್ತದೆ.

ಪ್ಯಾನ್ ಅಮಾನ್ಯವಾಗಿರುತ್ತದೆ :
ನಿಯಮದ ಪ್ರಕಾರ ನೀವು ನಿಮ್ಮ ಆಧಾರ್ - ಪ್ಯಾನ್ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ಅಡಿಯಲ್ಲಿ ನಿಮ್ಮ ಪ್ಯಾನ್ ಅಮಾನ್ಯವಾಗುತ್ತದೆ. ತಜ್ಞರ ಪ್ರಕಾರ ಪ್ಯಾನ್ ಕಾರ್ಡ್ ಲಿಂಕ್ ಇಲ್ಲದಿದ್ದರೆ, ಆನ್‌ಲೈನ್‌ನಲ್ಲಿ ಐಟಿಆರ್ ಸಲ್ಲಿಸುವುದು ಕಷ್ಟವಾಗುತ್ತದೆ. ನಿಮ್ಮ ತೆರಿಗೆ ಮರುಪಾವತಿ ಪೂರ್ಣಗೊಳ್ಳುವುದಿಲ್ಲ. ಇದಲ್ಲದೆ ನೀವು ಯಾವುದೇ ಹಣಕಾಸಿನ ವಹಿವಾಟು ನಡೆಸಿದಾಗ ಆ ಸಮಯದಲ್ಲಿ ನಿಮಗೆ ಪ್ಯಾನ್ ಬಳಸಲು ಸಾಧ್ಯವಾಗುವುದಿಲ್ಲ.

SMS ಮೂಲಕ ಈ ರೀತಿ ಲಿಂಕ್ ಮಾಡಿ:
ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಎಸ್‌ಎಂಎಸ್ ಮೂಲಕ ಆಧಾರ್-ಪ್ಯಾನ್ ಅನ್ನು ಸಹ ಲಿಂಕ್ ಮಾಡಬಹುದು ಎಂಬ ಆಯ್ಕೆಯನ್ನು ನೀಡಿದೆ. ಈ ವಿಧಾನವು ಸುಲಭವಾಗಿದೆ. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ನೀವು ಯುಐಡಿಪಿಎನ್ (UIDPN)ಅನ್ನು ಟೈಪ್ ಮಾಡಬೇಕು. ಇದರ ನಂತರ ಸ್ಪೇಸ್ ನೀಡುವ ಮೂಲಕ ನಿಮ್ಮ ಆಧಾರ್ ಸಂಖ್ಯೆ ಮತ್ತು ನಂತರ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಉದಾಹರಣೆಗೆ 567678 ಅಥವಾ 56161 ಗೆ ಕಳುಹಿಸಲು UIDPAN. ಇದರ ನಂತರ ಆದಾಯ ತೆರಿಗೆ ಇಲಾಖೆ ನಿಮ್ಮ ಎರಡೂ ಸಂಖ್ಯೆಗಳನ್ನು ಲಿಂಕ್ ಪ್ರಕ್ರಿಯೆಯಲ್ಲಿ ಇರಿಸುತ್ತದೆ.

ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?

ಮೊದಲನೆಯದಾಗಿ ನಿಮ್ಮ ಖಾತೆಯನ್ನು ರಚಿಸದಿದ್ದರೆ ಮೊದಲು ನಿಮ್ಮನ್ನು ನೋಂದಾಯಿಸಿ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ (www.incometaxindiaefiling.gov.in).
ವೆಬ್‌ಸೈಟ್‌ನಲ್ಲಿ 'ಲಿಂಕ್ ಆಧಾರ್' ಒಂದು ಆಯ್ಕೆ ಕಾಣಿಸುತ್ತದೆ, ಇಲ್ಲಿ ಕ್ಲಿಕ್ ಮಾಡಿ.
ಲಾಗಿನ್ ಮಾಡಿದ ನಂತರ ನಿಮ್ಮ ಖಾತೆಯ ಪ್ರೊಫೈಲ್ ಸೆಟ್ಟಿಂಗ್‌ಗಳಿಗೆ ಹೋಗಿ.
ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಆಯ್ಕೆಯನ್ನು ನೋಡುತ್ತೀರಿ ಅದನ್ನು ಆಯ್ಕೆ ಮಾಡಿ.
ಇಲ್ಲಿ ನೀಡಿರುವ ವಿಭಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ.
ಮಾಹಿತಿಯನ್ನು ಭರ್ತಿ ಮಾಡಿದ ನಂತರ ಕೆಳಗೆ ತೋರಿಸಿರುವ 'ಲಿಂಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ಆಧಾರ್ ಲಿಂಕ್ ಆಗುತ್ತದೆ.
ರದ್ದುಗೊಳಿಸಿದ ಪ್ಯಾನ್ ಕಾರ್ಡ್ ಬಳಸಿದರೆ.
ಪ್ಯಾನ್ ಕಾರ್ಡ್ ರದ್ದುಗೊಂಡ ನಂತರ ಅದನ್ನು ಮತ್ತೆ ಕಾರ್ಯರೂಪಕ್ಕೆ ತರಬಹುದು. ಆದರೆ ಈ ಮಧ್ಯೆ ಯಾರಾದರೂ ರದ್ದುಗೊಳಿಸಿದ ನಿಷ್ಕ್ರಿಯ ಪ್ಯಾನ್ ಕಾರ್ಡ್ ಬಳಸಿದರೆ ಅದನ್ನು ಆದಾಯ ತೆರಿಗೆ ಕಾಯ್ದೆಯಡಿ ಸೆಕ್ಷನ್ 272 ಬಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪ್ಯಾನ್ ಹೊಂದಿರುವವರು 10,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ರದ್ದುಗೊಳಿಸಿದ ಪ್ಯಾನ್ ಕಾರ್ಡ್ ಅನ್ನು ಮತ್ತೆ ಬಳಸಿದರೆ ದಂಡವನ್ನು ಸಹ ಹೆಚ್ಚಿಸಬಹುದು.

60 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ 'ಪ್ರಧಾನಮಂತ್ರಿ ವಯೋ ವಂದನ' ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಪರಿಷ್ಕೃತ ಪಿಂಚಣಿ ದರದೊಂದಿಗೆ ಅನ...
28/05/2020

60 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ 'ಪ್ರಧಾನಮಂತ್ರಿ ವಯೋ ವಂದನ' ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಪರಿಷ್ಕೃತ ಪಿಂಚಣಿ ದರದೊಂದಿಗೆ ಅನುಷ್ಠಾನಗೊಂಡಿರುವ ಈ ಯೋಜನೆ ಭಾರತೀಯ ಜೀವ ವಿಮಾ ನಿಗಮದಿಂದ ನಿರ್ವಹಿಸಲ್ಪಡುತ್ತಿದೆ.

2020ರ ಮೇ 26ರಿಂದ 2023ರ ಮಾರ್ಚ್ 31ರವರೆಗೆ ಯೋಜನೆಯ ಪಾಲಿಸಿಗಳು ಮಾರಾಟಕ್ಕೆ ಲಭ್ಯವಿದ್ದು, ನೇರವಾಗಿ ಅಥವಾ ಭಾರತೀಯ ಜೀವವಿಮಾ ನಿಗಮದ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿಯೂ ಖರೀದಿಸಬಹುದಾಗಿದೆ.

ಯೋಜನೆಯಡಿ ಖರೀದಿಸುವ ಪಾಲಿಸಿಗಳ ಒಟ್ಟು ಮೌಲ್ಯ 15ಲಕ್ಷ ರೂ. ಮೀರದಂತಿರಬೇಕಾಗಿದ್ದು, ಮಾಸಿಕ ಗರಿಷ್ಠ 9,250 ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ. ಪಾಲಿಸಿ ಅವಧಿಯಲ್ಲಿ ಪಿಂಚಣಿದಾರ ಮೃತಪಟ್ಟರೆ ನಾಮಿನಿ ಅಥವಾ ಉತ್ತರಾಧಿಕಾರಿಗೆ ಹಣ ಪಾವತಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೆ ಪ್ರವೀಣ್,
9141866866 ಅಥವಾ
ಸಮೀಪದ ಭಾರತೀಯ ಜೀವವಿಮಾ ನಿಗಮದ ಕಚೇರಿಗೆ ಭೇಟಿ ನೀಡಬಹುದಾಗಿದೆ.

ಡ್ರೈವಿಂಗ್ ಲೈಸೆನ್ಸ್ ನವೀಕರಣ ಈಗ ಇನ್ನಷ್ಟು ಸುಲಭದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಕಾರಣಕ್ಕೆ ಜನರು ಮನೆಯಲ್ಲಿಯೇ ಇರುವಂತಾಗಿದೆ. ಇಂತಹ ಸಂದ...
27/05/2020

ಡ್ರೈವಿಂಗ್ ಲೈಸೆನ್ಸ್ ನವೀಕರಣ ಈಗ ಇನ್ನಷ್ಟು ಸುಲಭ

ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಕಾರಣಕ್ಕೆ ಜನರು ಮನೆಯಲ್ಲಿಯೇ ಇರುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಲವರ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದು ಹೋಗಿದ್ದರೆ, ಇನ್ನೂ ಕೆಲವರ ಡ್ರೈವಿಂಗ್ ಲೈಸೆನ್ಸ್ ಅವಧಿ ಶೀಘ್ರದಲ್ಲೇ ಮುಗಿಯಲಿದೆ.

ದೇಶದ ಹಲವೆಡೆ ಆರ್‌ಟಿಒ ಕಚೇರಿಗಳನ್ನು ಮುಚ್ಚಲಾಗಿದ್ದು, ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಸಮಸ್ಯೆ ಎದುರಾಗಿದೆ. ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿರುವ ಕಾರಣಕ್ಕೆ ಹಲವರಿಗೆ ತುರ್ತು ಪರಿಸ್ಥಿತಿಯಲ್ಲೂ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಆರ್‌ಟಿಒಗಳಲ್ಲಿ ಜನಸಂದಣಿಯನ್ನು ಕಡಿಮೆಗೊಳಿಸಲು ಹಾಗೂ ಜನರು ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಅನುಕೂಲವಾಗುವ ಕಾರಣಕ್ಕೆ ಕೇಂದ್ರ ಸರ್ಕಾರವು ಆನ್‌ಲೈನ್ ಸೌಲಭ್ಯವನ್ನು ಜಾರಿಗೆ ತಂದಿದೆ.

ಆನ್‌ಲೈನ್ ಚಾಲನಾ ಪರವಾನಗಿ ನವೀಕರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಮಯವನ್ನು ಉಳಿಸಬಹುದು. ಮೊದಲನೆಯದಾಗಿ, ಈ ಲಿಂಕ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಡ್ರೈವಿಂಗ್ ಲೈಸೆನ್ಸ್ ನವೀಕರಣದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು( https://sarathi.parivahan.gov.in ) . ನಂತರ ಎಡಭಾಗದಲ್ಲಿರುವ ಅಪ್ಲೈ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಸರ್ವೀಸಸ್ ಆನ್ ಡ್ರೈವಿಂಗ್ ಲೈಸೆನ್ಸ್ ಕ್ಲಿಕ್ ಮಾಡಿ, ನಂತರ ಅಲ್ಲಿ ಸೂಚಿಸುವ ಪ್ರತಿ ಹಂತವನ್ನೂ ಅನುಸರಿಸ ಬೇಕು.

ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡಿ, ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ, ಆನ್‌ಲೈನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಕೆಲವು ದಿನಗಳ ನಂತರ ಹೊಸ ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಅಗತ್ಯವಾದ ದಾಖಲೆಗಳು:
ಮೊದಲು ನಿಗದಿತ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಿ ಮತ್ತೆ ಅಪ್‌ಲೋಡ್ ಮಾಡಬೇಕು.
40 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ನಮೂನೆ ಫಾರ್ಮ್ 1 ಎಗೆ ವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು.
ಅವಧಿ ಮೀರಿದ ಡ್ರೈವಿಂಗ್ ಲೈಸೆನ್ಸ್
ಪಾಸ್‌ಪೋರ್ಟ್ ಸೈಜ್‌ನ ಫೋಟೋ
ಆಧಾರ್ ಕಾರ್ಡ್.

ಡ್ರೈವಿಂಗ್ ಲೈಸೆನ್ಸ್ ಅವಧಿಯು 20 ವರ್ಷಗಳವರೆಗೆ ಇರುತ್ತದೆ. ಅವಧಿ ಮುಗಿದ ನಂತರ ನವೀಕರಣಕ್ಕೆ 30 ದಿನಗಳ ಸಮಯ ನೀಡಲಾಗುತ್ತದೆ. ಇದರ ನಂತರ, ನವೀಕರಣಕ್ಕಾಗಿ ಯಾರಾದರೂ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಲಾಗುತ್ತದೆ.

Address

AKUL COMPLEX Bypass ROAD
Kushalnagar
571234

Opening Hours

Monday 9:30am - 7:30pm
Tuesday 9:30am - 7:30pm
Wednesday 9:30am - 7:30pm
Thursday 9:30am - 7:30pm
Friday 9:30am - 7:30pm
Saturday 9:30am - 7:30pm
Sunday 9:30am - 5pm

Website

Alerts

Be the first to know and let us send you an email when SMS Enterprises posts news and promotions. Your email address will not be used for any other purpose, and you can unsubscribe at any time.

Share