26/08/2026
ಮಾನ್ಯರೇ,
ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ.ಯ 31ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಹೊಸಪೇಟೆಯ ಹೋಟೆಲ್ ಮಲ್ಲಿಗಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿಶ್ವನಾಥ ಹಿರೇಮಠ ಅವರು ವಹಿಸಿದ್ದರು. BOM ಅಧ್ಯಕ್ಷರಾದ ಶ್ರೀ ಬಿ. ಎನ್. ಕುಲಕರ್ಣಿ ಹಾಗೂ ನಿರ್ದೇಶಕರಾದ ಶ್ರೀ ದೊಡ್ಡಬೋರಯ್ಯ, ಶ್ರೀ ಲಲಿತಪ್ರಸನ್ನ ಆರ್., ಶ್ರೀ ಗಂಗಾಧರ ಪತ್ತಾರ, ಶ್ರೀ ಶಂಕರ ಜಾಧವ್, ಶ್ರೀ ಅನಂತ್ ಜೋಶಿ, ಶ್ರೀ ಜಗದೀಶ್ ಹಿರೇಮಠ, ಶ್ರೀ ಶಿವಕುಮಾರ್ ಶೆಟ್ಕರ್, ಶ್ರೀ ಬೇಳೂರು ಸುದರ್ಶನ, ಶ್ರೀಮತಿ ನವ್ಯಶ್ರೀ ಹಿರೇಮಠ, ಶ್ರೀಮತಿ ಉಷಾ ಕೆ., ಶ್ರೀ ರಾಘವೇಂದ್ರ ಎಂ. ಹಾಗೂ ಶ್ರೀ ಸುನಿಲ್ ಕುಮಾರ್ ಹಿರೇಮಠ ಹಾಗೂ BOM ಸದಸ್ಯರಾದ ಶ್ರೀ ಚಂದಾ ಹುಸೇನ್, ಶ್ರೀ ಅಚ್ಯುತ್ ರಾವ್ ಮತ್ತು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಸನ್ನ ಹಿರೇಮಠ, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬ್ಯಾಂಕಿನ ಕಾರ್ಯಚಟುವಟಿಕೆಗಳು, ಸಾಧನೆಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಹಕಾರದೊಂದಿಗೆ 31ನೇ ವಾರ್ಷಿಕ ಸಾಮಾನ್ಯ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.
#ಆಗಸ್ಟ್೨೬ #ಮಹಾಸಭೆ #31ನೇಮಹಾಸಭೆ