21/08/2026
ರಜತ ಮಹೋತ್ಸವದ ಸಂಭ್ರಮದ ಆತ್ಮೀಯ ಆಹ್ವಾನ 🌸🌟
“25 ವರ್ಷಗಳ ನಂಬಿಕೆ…
25 ವರ್ಷಗಳ ಸೇವೆ…
25 ವರ್ಷಗಳ ಯಶಸ್ಸಿನ ಪಯಣ…” ✨
ನಮ್ಮ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ನಮ್ಮೊಂದಿಗೆ ಹೆಜ್ಜೆ ಹಾಕಿದ ಗೌರವಾನ್ವಿತ ಸದಸ್ಯರು, ಠೇವಣಿದಾರರು, ಸಾಲಗಾರರು ಹಾಗೂ ಆತ್ಮೀಯ ಹಿತೈಷಿಗಳನ್ನು ಈ ಸ್ಮರಣೀಯ ಸಮಾರಂಭಕ್ಕೆ ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ. 🙏
ನಿಮ್ಮ ನಂಬಿಕೆ, ಸಹಕಾರ ಮತ್ತು ಪ್ರೋತ್ಸಾಹವೇ ನಮ್ಮ 25 ವರ್ಷಗಳ ಯಶಸ್ವಿ ಪಯಣದ ಶಕ್ತಿ. ❤️
📅 ದಿನಾಂಕ: ಭಾನುವಾರ, 23-08-2026
⏰ ಸಮಯ: ಬೆಳಿಗ್ಗೆ 11:00 ಗಂಟೆಗೆ
📍 ಸ್ಥಳ: ಶ್ರೀ ಮಹಾಲಕ್ಷ್ಮೀ ಸಭಾ ಭವನ, ಗೋಕಾಕ್
💐 ತಮ್ಮ ಅಮೂಲ್ಯ ಉಪಸ್ಥಿತಿಯಿಂದ ಈ ಐತಿಹಾಸಿಕ ಕ್ಷಣವನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ಸ್ಮರಣೀಯವಾಗಿಸಬೇಕಾಗಿ ಆತ್ಮೀಯವಾಗಿ ಕೋರುತ್ತೇವೆ.
✨ ಬನ್ನಿ… ಸಂಭ್ರಮಿಸೋಣ…
25 ವರ್ಷಗಳ ಯಶಸ್ಸಿನ ಪಯಣವನ್ನು ನೆನಪಿಸಿಕೊಳ್ಳೋಣ…
ಹೊಸ ಕನಸುಗಳೊಂದಿಗೆ ಹೊಸ ಹೆಜ್ಜೆ ಇಡೋಣ! ✨
🙏 ತಾವೆಲ್ಲರೂ ಆತ್ಮೀಯವಾಗಿ ಆಗಮಿಸಿ, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಬೇಕಾಗಿ ವಿನಂತಿ
ಪ್ರೀತಿಯ ಭೋಜನ 12.30 ಕ್ಕೆ