Sriguru natural dry fruits

Sriguru natural dry fruits Cashew, Dry dates, Dry Grapes, Betel nuts, Badam nut, and all other dry fruits also Masala items @ W rate

10/04/2021

ಅಕೊರಸ್ ಕೆಲಾಮಸ್ (Acorus calamus L) ಎಂದು ಕರೆಯಲ್ಪಟ್ಟ ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ.
ಇದು ದೇಹಕ್ಕೆ ತುಂಬಾ ತಂಪು. ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೊಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ....

ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. ಜೊತೆಗೆ, ಮನೆ ಮದ್ದಾಗಿ ಬಳಸುವ ಈ ಗಿಡ ಬಜೆ ಬೇರು ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ. ಆದರೆ, ಇದರಿಂದ ಹೊರಹೊಮ್ಮುವ ಸುವಾಸನೆ ಮಾತ್ರ ಅದ್ಭುತ....

ಇದರ ಉಪಯೋಗ.......🌹

1. ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ 2 – 3 ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.

2. ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

3. ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ 10ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು 40 ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ...

4. ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ.

5. ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.

6. ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.

7. ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.

8. ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.

9. ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.

10. ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.

11. ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.[೫]

12. ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.

ಉತ್ತಮ ಜೀರ್ಣಕ್ರಿಯೆ: ಬಜೆ ಬೇರನ್ನು ತಿಂಗಳಿಗೆ 2 ಬಾರಿ ತೇಯ್ದು ಒಂದು ಚಮಚ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಜೊತೆಗೆ, ಹೊಟ್ಟೆ ನೋವು, ಜಂತು ಹುಳು ಈ ರೀತಿಯ ಸಮಸ್ಯೆಗಳ ನಿವಾರಣೆಗೆ ಬಜೆ ಬೇರು ಬಹಳ ಪರಿಣಾಮಕಾರಿ.

ಚಿಕ್ಕ ಮಕ್ಕಳಲ್ಲಿ ಮಾತು ಶುದ್ಧತೆ: ಮಕ್ಕಳ ಉಚ್ಛಾರಣೆಯಲ್ಲಿ ತೊದಲು ಕಂಡುಬಂದರೆ ಪ್ರತಿದಿನ ಬಜೆ ಬೇರನ್ನು ತೇಯ್ದು ಕೊಡುವುದರಿಂದ ಮಾತಿನಲ್ಲಿ ಶುದ್ಧತೆ ಕಂಡುಬರುತ್ತದೆ. ಕೇವಲ ಮಕ್ಕಳಲ್ಲದೆ ವಯಸ್ಕರೂ ಸಹ ಈ ಬೇರನ್ನು ಸೇವಿಸುವ ಮೂಲಕ ಸ್ಪಷ್ಟವಾಗಿ ಉಚ್ಛರಿಸಬಹುದಾಗಿದೆ.

ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಪರಿಹಾರ: ಉಸಿರಾಟ ಕ್ರಿಯೆ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಬಜೆ ಬೇರನ್ನು ಕುಟ್ಟಿ, ಪುಟಿ ಮಾಡಿ, ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಸೇವಿಸುವುದು ಉತ್ತಮ. ನೆಗಡಿ(ಶೀತ), ಜ್ವರದ ಸಮಸ್ಯೆಗಳಿಗೂ ಬಜೆ ಬೇರಿನ ಕಷಾಯ ಅತ್ಯಂತ ಪರಿಣಾಮಕಾರಿ...

*ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆಯುಷ್ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

10/01/2021
08/06/2020


Available Sri Guru Pooja Samagri
SRIGURU POOJA SAMAGRI,
Opp.India Bank, Near Kumbara oni,
Kalamma Street, Ballari-583101
9036359097. 9035358565.
www.gurubusy.com

11/02/2020
03/03/2019

Address: Reg Office : 240/16, Opp Indian Bank, Kalamma Street, Dispatching Office : Gurubusy.com , Opp Graham Road, Goldsmith Street, Ballari-583101.

03/04/2017
daily usage Agarabatti @ BEST Wholesale RATE
05/06/2015

daily usage Agarabatti @ BEST Wholesale RATE

SRIGURU POOJA AGARABATTI ON DAILY USAGE FOR GOD PRAYER.
THE PRICE @ WHOLESALE RATE

13/07/2014

Manufacturer and Wholesaler in all kind of POOJA Items,Dry fruits, Ayurveda Products, Clothing, Masal

Address

SRIGURU POOJA SAMAGRI. Opp MAHAVEER TEA CO, Kalamma Street
Bellary
583101

Telephone

9035358565

Website

Alerts

Be the first to know and let us send you an email when Sriguru natural dry fruits posts news and promotions. Your email address will not be used for any other purpose, and you can unsubscribe at any time.

Contact The Business

Send a message to Sriguru natural dry fruits:

Share