ನಾನು ನನ್ನ ಕನಸು

ನಾನು ನನ್ನ ಕನಸು Contact information, map and directions, contact form, opening hours, services, ratings, photos, videos and announcements from ನಾನು ನನ್ನ ಕನಸು, Financial service, SOLAPUR Road, Vijayapur.

ಸ್ನೇಹಿತರೆ ನಮ್ಮ ಶಾಲೆಯನ್ನು ಪ್ರಕಾರವಾಗಿ ಜ್ಯೋತಿ ಬೆಳಗಿಸಲು ವಿಧ್ಯಾರ್ಥಿಗಳು ಬೇಕಾಗಿದ್ದಾರೆ.ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀ ಛತ್...
26/02/2020

ಸ್ನೇಹಿತರೆ ನಮ್ಮ ಶಾಲೆಯನ್ನು ಪ್ರಕಾರವಾಗಿ ಜ್ಯೋತಿ ಬೆಳಗಿಸಲು ವಿಧ್ಯಾರ್ಥಿಗಳು ಬೇಕಾಗಿದ್ದಾರೆ.
ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯು ಜಿಲ್ಲೆಯ ಒಂದು ಉತ್ತಮ ವಿದ್ಯಾ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ ಇದಕ್ಕೆಲ್ಲ ನಿಮ್ಮೆಲ್ಲರ ಸಹಕಾರ ಹೀಗೆ ನಮಗೆ ತೋರಿಸಿ,
"ವಿದ್ಯಾ ನಮ್ಮದು ವಿದ್ಯಾರ್ಥಿಗಳ ಬಲ ನಿಮ್ಮದು"
ನಿಮ್ಮ ಮಕ್ಕಳಲ್ಲಿರುವ ಅಭೂತಪೂರ್ವ ಕಲೆ ಮತ್ತು ಶಿಕ್ಷಣವನ್ನು ಹೊರಗೆ ತರಲು ನಮ್ಮ ಸಂಸ್ಥೆಯಿಂದ ನಿಮ್ಮ ಮಕ್ಕಳಿಗೆ ಸಹಕಾರ,
ಒಂದು ಬಾರಿ ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕರೆ ತಂದು ನಮ್ಮಲ್ಲಿರುವ ನೂರಿತ ಶಿಕ್ಷಕರೊಂದಿಗೆ ಸಂದರ್ಶನ ಮಾಡಿಸಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ ಪಡೆದುಕೊಳ್ಳಿ,

ಅದ್ಬುತ ಸಾಧಕ; ಸ್ಟೀಫನ್ ಹಾಕಿಂಗ್!ಭೌತಶಾಸ್ತ್ರದಲ್ಲಿ ಐಸಾಕ್ ನ್ಯೂಟನ್‌ನಷ್ಟೇ ಹೆಸರು ಮಾಡಿರುವ ಭೌತಶಾಸ್ತ್ರಜ್ಞ ನಮ್ಮ ನಿಮ್ಮ ಕಾಲದ ಸ್ಟೀಫನ್ ಹಾಕ...
14/03/2018

ಅದ್ಬುತ ಸಾಧಕ; ಸ್ಟೀಫನ್ ಹಾಕಿಂಗ್!

ಭೌತಶಾಸ್ತ್ರದಲ್ಲಿ ಐಸಾಕ್ ನ್ಯೂಟನ್‌ನಷ್ಟೇ ಹೆಸರು ಮಾಡಿರುವ ಭೌತಶಾಸ್ತ್ರಜ್ಞ ನಮ್ಮ ನಿಮ್ಮ ಕಾಲದ ಸ್ಟೀಫನ್ ಹಾಕಿಂಗ್. ಭೌತಶಾಸ್ತ್ರವನ್ನು ಸಾಮಾನ್ಯರಿಗೆ ತಲುಪಿಸಲು ಆತ ನೀಡಿದ ಕೊಡುಗೆ ನಿಜಕ್ಕೂ ಅದ್ಭುತ. ಇತಿಹಾಸದಲ್ಲೇ ಅತೀ ಹೆಚ್ಚು ಮಾರಾಟವಾದ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆತನ ಪುಸ್ತಕ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ನ್ಯೂಯಾರ್ಕ್‌ನ ಬೆಸ್ಟ್‌ಲಿಸ್ಟರ್‌ಗಳ ಪಟ್ಟಿಯಲ್ಲಿ ಸತತ ನಾಲ್ಕು ವರ್ಷಗಳ ಕಾಲ ಅಗ್ರ ಪಂಕ್ತಿಯಲ್ಲಿತ್ತು! ಕರಾರು ವಕ್ಕಾಗಿ ಗೆಲಿಲಿಯೋ ಸತ್ತ 300ವರ್ಷಗಳ ನಂತರ ಹುಟ್ಟಿದ ಹಾಕಿಂಗ್, ಪಕ್ಕಾ ನಾಸ್ತಿಕ. ಆದರೆ, ಗೆಲಿಲಿಯೋನ ಪುನರ್ಜನ್ಮ ನಾನು ಎಂಬಂತೆ ಹೇಳಿ ಕೊಂಡು ಗೇಲಿ ಮಾಡುತ್ತಾನೆ. ೨೦ನೆಯ ಶತಮಾನದ ಮಧ್ಯಭಾಗದಲ್ಲಿ ಜಗತ್ತನ್ನೇ ತನ್ನ ವಿಚಿತ್ರ ಸಂಕಲ್ಪ ಶಕ್ತಿ ಮತ್ತು ಸಂಶೋಧನೆಗಳಿಂದ ಬೆರಗುಗೊಳಿಸಿದ ಅತ್ಯದ್ಭುತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಕ್ವಾಂಟಂ (ಕ್ವಾಂಟಂ: ಜಗತ್ತು ಅಣು ಮತ್ತು ಕಣಗಳಿಂದ ಕೂಡಿದೆ ಎಂದು ವಿಜ್ಞಾನ ಪ್ರತಿಪಾದಿಸುತ್ತದೆ. ಅಣುವಿಗೂ ಕಿರಿಯದಾದ ಅಗೋಚರತೆಯನ್ನು ಕ್ವಾಂಟಂ ಎಂದು ಕರೆದು ಬಿಡಿ ಸಾಕು!) ಸಿದ್ಧಾಂತಕ್ಕೆ ಸಂಬಂಧಿಸಿದಂತೆ ‘ಕಾಲ ‘ಕಪ್ಪು ರಂಧ್ರ (ಕೃಷ್ಣ ರಂಧ್ರ) ‘ಕಾಲ್ಪನಿಕ ಕಾಲದ ಕುರಿತು ಪ್ರಮೇಯ, ಶಾಶ್ವತ ಸಿದ್ಧಾಂತ ಮಂಡಿಸಿ ಭೌತಶಾಸ್ತ್ರದ ಗಂಭೀರ ವಿದ್ಯಾರ್ಥಿಗಳೂ ಬೆರಗಾಗುವಂತೆ ಮಾಡಿದ.

ವಿದ್ಯಾರ್ಥಿ ದಿನಗಳಿಂದಲೂ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಬೃಹತ್ ಪಾಂಡಿತ್ಯ ಹೊಂದಿದ್ದ ಹಾಕಿಂಗ್, ತನ್ನ 21ನೇ ವರ್ಷದಲ್ಲಿ ‘ಮೋಟಾರ್ ನ್ಯೂರಾನ್ ಎಂಬ ತೀರಾ ಅಪರೂಪದ ಖಾಯಿಲೆಗೆ ಒಳಗಾಗುತ್ತಾನೆ. ಕೋಟಿ ಗೊಬ್ಬರಿಗೂ ಅಂತಹ ಖಾಯಿಲೆ ಬರುವುದೂ ಕೂಡಾ ಅಪರೂಪ! ಮೋಟಾರ್ ನ್ಯೂರಾನ್ (ನ್ಯೂರೋಮೋಟರ್ ಡಿಸೀಸ್) ಖಾಯಿಲೆ ಪೀಡಿತ ವ್ಯಕ್ತಿಯ ನರನಾಡಿಗಳು ನಿಯಂತ್ರಿಸುವ ಕೇಂದ್ರ ನರಮಂಡಲ ಕೊಂಚ ಕೊಂಚವಾಗೇ ತನ್ನ ವ್ಯಾಪ್ತಿಯ ಕಾರ್ಯವನ್ನು ಸ್ಥಗಿತಗೊಳಿಸುತ್ತಾ ಸಾಗುತ್ತದೆ. ದಿನಕಳೆದಂತೆ ಈ ಖಾಯಿಲೆಗೆ ಪೀಡಿತನಾದ ವ್ಯಕ್ತಿಯ ದೇಹದ ಪ್ರತಿಯೊಂದು ಅಂಗಗಳು ಚಲನೆಯನ್ನು ಕಳೆದುಕೊಳ್ಳುತ್ತದೆ. ದಿನದಿಂದ ದಿನಕ್ಕೆ ನಿಶ್ಯಕ್ತನಾಗುತ್ತಾ ಸಾಗುವ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುತ್ತಾನೆ. ಹಾಗೆ ತನ್ನ ಅಂಗಾಂಗಗಳು ಚಲನೆಯನ್ನು ಕಳೆದುಕೊಳ್ಳತೊಡಗಿದಂತೆ, ಹಾಕಿಂಗ್ ಒಂದು ದಿನ ಕಾಲೇಜಿನ ಮೆಟ್ಟಿಲು ಇಳಿ ಯುವ ಬರದಲ್ಲಿ ಆಯ ತಪ್ಪಿ ಬಿದ್ದು ಬಿಟ್ಟ. ಪ್ರಜ್ಞೆ ಮರಳಿದ ವ್ಯಕ್ತಿಗೆ ಎದ್ದು ನಿಲ್ಲಲೂ ಸಹ ಸಾಧ್ಯವಾಗಲಿಲ್ಲ. ಅಲ್ಲದೆ ಪ್ರಜ್ಞೆ ಮರಳಿದ್ದು ಎರಡು ದಿನಗಳ ನಂತರ! ಆಸ್ಪತ್ರೆಯ ಬೆಡ್‌ನಲ್ಲಿ ಕಣ್ಣು ಬಿಟ್ಟ ಹಾಕಿಂಗ್ ವೈದ್ಯರಲ್ಲಿ ಮೊದಲು ಇಟ್ಟ ಪ್ರಶ್ನೆ ನನ್ನ ಮೆದುಳಿಗೇನೂ ತೊಂದರೆ ಇಲ್ಲವಲ್ಲವೇ? ಎಂದು.
ಇಂದಿಗೂ ದೇಹದ ಇತರ ಎಲ್ಲಾ ಅಂಗಾಂಗಳ ಚಲನೆಯನ್ನು ಕಳೆದುಕೊಂಡು ಗಾಲಿ ಕುರ್ಚಿಯ ಮೇಲೆ ಬದುಕು ಸಾಗಿಸುತ್ತಿರುವ ಕಳೆದ ಶತಮಾನದ ಹೀರೋ ಹಾಕಿಂಗ್ ಮಾತ್ರ ಕೊಂಚವೂ ತನಗೆ ಬಂದೆರಗಿದ ಖಾಯಿಲೆಯಿಂದ ವಿಚಲಿತನಾಗಲಿಲ್ಲ. ಆತನ ಮೆದುಳಿನಲ್ಲಿ ಬೌದ್ದಿಕ ಪ್ರಜ್ಞೆಯನ್ನು ಗಾಢ ಚಿಂತನೆಗೆ ಹಚ್ಚುವ ಭಾಗ ಮಾತ್ರ ಕೊಂಚವೂ ಕಸಿವಿಸಿಗೊಳ್ಳದೆ ಆತನ ಸಂಶೋಧನೆಗೆ ಪೂರಕವಾಗಿದೆ. ಆತನ ಫೋಟೋವನ್ನೊಮ್ಮೆ ಗಮನಿಸಿ ನೋಡಿ, ಅಲ್ಲಿ ಪ್ರಶಾಂತತೆಯಿಂದ ಗೋಚರಿಸುವ ಎರಡು ಕಣ್ಣಿನ ಗೋಲಗಳು ಮಾತ್ರ ಅತ್ತಿಂದಿತ್ತ ಚಲಿಸುತ್ತಿವೆಯೇ ಹೊರತು, ದೇಹದ ಇತರ ಎಲ್ಲಾ ಅಂಗಾಂಗಗಳೂ ದೇಹದಿಂದ ಬೇರ್ಪಡಿಸಿದಂತೆ ಅಂದರೆ ಇದ್ದೂ ಉಪಯೋಗಕ್ಕಿಲ್ಲದವು. ಗಾಲಿ ಕುರ್ಚಿಯೇ ಆತನನ್ನು ಅಪ್ಪಿಕೊಂಡು ಒಪ್ಪಿಕೊಂಡಿರುವ ಆತ್ಮೀಯ. ಅಲ್ಲದೆ ಮಾತನಾಡುವ ಶಕ್ತಿಯನ್ನೂ ಸಹ ಕಳೆದುಕೊಂಡಿರುವುದರಿಂದ ಆತನ ಗಂಟಲಿಗೆ ಧ್ವನಿವರ್ಧಕ (voice modulater)ಅಳವಡಿಸಲಾಗಿದೆ. ಗಾಲಿ ಕುರ್ಚಿಯಲ್ಲಿ ಇಟ್ಟಿರುವ ಕಂಪ್ಯೂಟರ್ ಆತ ಗೊರ ಗೊರ ಶಬ್ದ ಹೊರಡಿಸಿದಂತೆ, ಶಬ್ದವನ್ನು ಮಾತನ್ನಾಗಿ ಪರಿವರ್ತಿಸುತ್ತದೆ! ಈ ಘೋರ ವ್ಯಾಧಿಗೆ ಚಿಕಿತ್ಸೆ ಎಂಬುದಿಲ್ಲ. ಇಂತಹಾ ನರಕ ಯಾತನೆಯಿಂದ ಮುಕ್ತಿ ಹೊಂದುವುದಾದರೆ ಅದು ಸಾವಿನಿಂದ ಮಾತ್ರ. ಒಂದು ಆಶ್ಚರ್ಯಕರ ಸಂಗತಿಯೆಂದರೆ, ಇಂದಿಗೂ ಹಾಕಿಂಗ್‌ನನ್ನು ಯಾವುದೇ ವೈದ್ಯರ ಬಳಿ ತೋರಿಸಿದರೂ ವೈದ್ಯರು ತಮ್ಮ ಮಾಮೂಲಿ ಶೈಲಿಯಲ್ಲಿ ‘ಹೆಚ್ಚೆಂದರೆ ಹಾಕಿಂಗ್ ಇನ್ನು ಎರಡು ವರ್ಷ ಬದುಕಬಹುದು ಎಂದು ಕರಾರುವಾಕ್ ಭವಿಷ್ಯ ನುಡಿಯುತ್ತಾರೆ. ಹೀಗೆ ವೈದ್ಯರು ಕಳೆದ ೪೦ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದಾರೆ!

ಸ್ಟೀಫನ್ ಹಾಕಿಂಗ್ ಹುಟ್ಟಿನಿಂದ ಹೀಗಿರಲಿಲ್ಲ. ಹಾಕಿಂಗ್ ಹುಟ್ಟಿದ್ದು ೧೯೪೨ ಜನವರಿ ೮ರಂದು ಇಂಗ್ಲೆಂಡಿನ ಲಂಡನ್ ಸಮೀಪದ ಆಕ್ಸ್‌ಫರ್ಡಿನಲ್ಲಿ. ತಂದೆ ಫ್ರಾಂಕ್ ಹಾಕಿಂಗ್ ವೃತ್ತಿಯಲ್ಲಿ ವೈದ್ಯ. ತಾಯಿ ಇಸಾಬೆಲ್ ಗೃಹಿಣಿ. ತಂದೆ ಗಿದ್ದದ್ದು ಮಗ ತನ್ನಂತೆ ವೈದ್ಯನಾಗಲಿ ಎಂಬ ಮಹದಾಸೆ. ಆದರೆ ಹಾಕಿಂ ಗ್‌ಗೆ ಗಣಿತ ಮತ್ತು ಭೌತ ವಿಜ್ಞಾನ ಗಳಲ್ಲಿ ಅಪಾರ ಆಸಕ್ತಿ. ತನ್ನ ಶಾಲಾ ದಿನಗಳಲ್ಲೇ ಗಣಿತ ಅಥವಾ ಭೌತ ವಿಜ್ಞಾನದ ಕ್ಲಿಷ್ಟ ಸಮಸ್ಯೆಗಳಿಗೆ ಹಾಕಿಂಗ್ ಲೀಲಾಜಾಲವಾಗಿ ಉತ್ತರ ನೀಡುತ್ತಿದ್ದ. ಕೊನೆಗೆ ಸಾಧಿಸಿದ್ದು ತನ್ನ ವಿಜ್ಞಾನಿಯಾಗುವ ಕನಸನ್ನೇ, ಅಷ್ಟು ಮಾತ್ರವಲ್ಲ ತಂದೆಯ ಆಸೆಯ ವೈದ್ಯ ವೃತ್ತಿಗೇ ಒಂದು ಸವಾಲಾಗಿ ಈ ಕ್ಷಣ ದವರೆಗೂ ಬದುಕಿದ್ದಾನೆ!

ಹಾಕಿಂಗ್ ಈ ಜಗತ್ತು ಕಂಡ ಅದ್ಬುತ ಭೌತಶಾಸ್ತ್ರಜ್ಞ. ತನ್ನ ಅಭೂತ ಪೂರ್ವ ಸಂಶೋಧನೆಗಳ ಮೂಲಕ ವಿಶ್ವವನ್ನೇ ದಂಗು ಬಡಿಸಿದಂತವನು. ವಿಶ್ವಕ್ಕೆ ‘ಕಾಲ(TIME)ದ ಕುರಿತು ಕರಾರುವಾಕ್ ನಿರ್ಧಾರಗಳನ್ನು ಈ ಕ್ಷಣದವರೆಗೂ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಹಾಕಿಂಗ್ ಸಂಕೀರ್ಣ ಕಾಲ, ಕಾಲ್ಪನಿಕ ಕಾಲವನ್ನೆಲ್ಲಾ ತನ್ನ ಕರಾರುವಾಕ್ ಲೆಕ್ಕದ ಮೂಲಕ ಒಪ್ಪಿಸುತ್ತಾನೆ (ಹಾಗೆಂದು ಪ್ರತಿಯೊಬ್ಬರೂ ಆತನ ಪ್ರತಿಪಾ ದನೆಯನ್ನು ಒಪ್ಪಿಕೊಳ್ಳುತ್ತಾರೆಂದಲ್ಲ. ಅಲ್ಲದೆ ವಿಜ್ಞಾನವೆಂದರೆ ಒಪ್ಪಿಗೆಯಾಗುವ ಸಂಗತಿಗಳನ್ನೂ ಪ್ರಶ್ನಿಸುತ್ತಾ ನಿಖರ ಉತ್ತರದವರೆಗೆ ತಲುಪುವುದು ಹಾಗೂ ವಿಜ್ಞಾನಕ್ಕೆ ಅಂತ್ಯವೆಂಬುದೇ ಇಲ್ಲ. ವಿಶ್ವಕ್ಕಿರಬಹುದೇ ಹೊರತು ವಿಜ್ಞಾನಕ್ಕಲ್ಲ. ಗೊಂದಲವಾಗುವುದಾದರೆ; ‘ವಿಶ್ವವೇ ಅಂತ್ಯವಾದಾಗಲೂ ವಿಜ್ಞಾನ ‘ಅಂತ್ಯಕ್ಕೆ ಕಾರಣ ಹುಡುಕುವುದರಲ್ಲಿ ಮಗ್ನವಾಗಿರುತ್ತದೆ!). ಈ ‘ಕಾಲದ ಕುರಿತು ಅದೆಂಥಾ ಶೋಧ ಎಂದೆಲ್ಲಾ ನೀವು ತಲೆಕೆಡಿಸಿಕೊಳ್ಳುವುದಾದರೆ, ನೀವು ಬದುಕಿರುವ ಈ ಕಾಲ, ನಿಮ್ಮ ತಂದೆ ಅವರ ತಂದೆಯ ಆ ಕಾಲ, ಅದಕ್ಕೂ ಹಿಂದಿನ ಈ ಜಗತ್ತು ಮಹಾನ್ ಸ್ಪೋಟ (BIG BANG)ದಿಂದ ಸಂಭವಿಸಿತು ಎನ್ನುವುದಾದರೆ- ಆಗಿನ ಕಾಲ, ಅದಕ್ಕೂ ಹಿಂದಿನ ಕಾಲ, ಮುಂದೆ ನಮ್ಮ ಮಕ್ಕಳ ಅವರ ಮಕ್ಕಳ ಕಾಲ ಹಾಗೂ ನಿಮಗೆ ಇನ್ನೂ ಸ್ಪಷ್ಟತೆ ಬೇಕೆಂದರೆ ನೀವನ್ನುತ್ತೀರಲ್ಲಾ, ‘ಕಾಲ ಕೆಟ್ಟೋಯ್ತು ಕಣಪ್ಪ, ನಮ್ ಕಾಲದಲ್ಲಿ ಇಂಗ್ ಇರ್‌ಲಿಲ್ಲ ಅಂತ ಆ ‘ಕಾಲ.

ಕ್ವಾಂಟಂ ಸಿದ್ಧಾಂತ ಪ್ರತಿಪಾದಿಸುವಂತೆ ಕಾಲವಿರಲು ಕಾರಣ ನೀವು ಅರ್ಥಾತ್ ಈ ವಿಶ್ವ. ಅಂದರೆ ನೀವಿಲ್ಲದಿದ್ದರೆ ಕಾಲವೂ ಇಲ್ಲ, ವಿಶ್ವವೂ ಇಲ್ಲ. ಕಾಲದ ಕುರಿತು ಯಾರಿಗೂ ಸ್ಪಷ್ಟ ಸತ್ಯಗಳನ್ನು ದಾಖಲಿಸಲು ಸಾಧ್ಯವಾಗದಿದ್ದರೂ, ನನ್ನ ಮತ್ತು ನಿಮ್ಮಂತಹಾ ಅದೆಷ್ಟೋ ಜನ ಅದನ್ನು ತಿಳಿದು ಏನು ಮಾಡಲಿಕ್ಕಿದೆ, ಅದೇನು ಅಗತ್ಯವಾ ಎಂದು ತೀರಾ ಅಸಡ್ಡೆಯಿಂದ ಮಾತನಾಡುತ್ತೇವೆ. ಆದರೆ, ವಾಸ್ತವದಲ್ಲಿ, ಈ ಕ್ಷಣಕ್ಕೂ ಎರಡು ಸಾವಿರಕ್ಕೂ ಅಧಿಕ ಭೌತಶಾಸ್ತ್ರದ ವಿದ್ಯಾರ್ಥಿಗಳು, ಡಾಕ್ಟರೇಟ್ ಹಂತದಲ್ಲಿ ‘ಕಾಲದ ಕುರಿತ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಂತಹ ಕಾಲದ ಕುರಿತ ಪ್ರಸ್ತುತ ಸತ್ಯದ ಸಂಗತಿಗಳನ್ನೇ ಹಾಕಿಂಗ್ ಹುಡುಕಿರುವುದು. ನಿಮಗೆ ಕಾಲದ ಹುಡುಕಾಟದ ಬಗ್ಗೆ ಗೊಂದಲ ವಾಗದೆ ಇರಬೇಕೆಂದರೆ, ‘ಈ ಕಾಲವೇ ಇಲ್ಲದಿದ್ದರೆ ನೀವು ನಾನು ಯಾರೂ ಇಲ್ಲ. ನಿನ್ನೆಯಂತೂ ಇಲ್ಲ. ನಾಳೆ ನೋ, ನೆವೆರ್... ಟೋಟಲ್ ಈ ವಿಶ್ವವೇ ಇಲ್ಲ! ಎಲ್ಲಾ ಖಾಲಿ ಖಾಲಿ!

ಹಾಕಿಂಗ್ ಪ್ರಕಾರ ಇನ್ನು ೩೦ವರ್ಷಗಳಲ್ಲಿ ಮನುಷ್ಯ ಚಂದ್ರನ ಮೇಲೆ ವಾಸ್ತವ್ಯ ಹೂಡಬಹುದು, ೫೦ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಸರಾಗವಾಗಿ ಹೋಗಿ ಬರಬಹುದು, ೨೦೦ವರ್ಷಗಳಲ್ಲಿ ಇತರ ಗ್ರಹಗಳ ಮೇಲೂ ಪ್ರಾಬಲ್ಯ ಹೊಂದಬಹುದು! ಇದನ್ನು ಆತ ಗ್ರಹಿಸಿರುವುದು ತನ್ನ ವಿಚಿತ್ರ ಸಂಶೋಧನೆಗಳ ಮೂಲಕ. ಅಂತಹದ್ದೇ ಒಂದು ಕುತೂಹಲದ ಸಂಗತಿಯಾಗಷ್ಟೇ ನಮ್ಮಲ್ಲಿ ಹುದುಗಿರುವ ‘ಅನ್ಯಗ್ರಹದ ಜೀವಿಗಳ ಕುರಿತೂ ಹಾಕಿಂಗ್ ಸಾಕಷ್ಟು ಅಭ್ಯಾಸದಲ್ಲಿ ತೊಡಗಿದ್ದಾನೆ. ಅಷ್ಟೇ ಅಲ್ಲ ನೀವು ಕ್ವಾಂಟಂ ಶಾಸ್ತ್ರವನ್ನು ಸಮರ್ಪಕವಾಗೇ ಬಳಸಿಕೊಂಡಲ್ಲಿ ನೀವು ಈಗ ಮುದುಕರಾಗಿದ್ದರೆ ನಿಮ್ಮ ಯೌವ್ವನದ ದಿನಗಳಿಗೊಮ್ಮೆ ಹೋಗಿ ಬರಬಹುದು! ಅಂತಹಾ ‘ಕಾಲಪಯಣದ ವಾಹನದ ತಯಾರಿಯಲ್ಲಿ ಹಾಕಿಂಗ್ ಸದ್ಯ ತೊಡಗಿಸಿಕೊಂಡಿದ್ದಾನೆ. ‘ಕಾಲದ ಕುರಿತ ಆತನ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಜಗತ್ತಿನಲ್ಲೇ ಹೆಚ್ಚು ಮಾರಾಟವಾದ ಪುಸ್ತಕ! ಅಷ್ಟೇ ಅಲ್ಲ, ಉನ್ನತ ಕೃತಿಗಳಲ್ಲಿ ಒಂದು ಎಂಬ ಗೌರವಕ್ಕೂ ಪಾತ್ರವಾಗಿದೆ. ಸದ್ಯ ನಾಲ್ಕು ಬಾರಿ ‘ನೋಬೆಲ್ ಪ್ರಶಸ್ತಿಯ ಕಾಂಪೌಂಡ್‌ವರೆಗೂ ಹೋಗಿ ವಾಪಾಸು ಬಂದಿದೆ. ಇಷ್ಟೆಲ್ಲವನ್ನೂ ಸಾಧಿಸಿರುವ ಹಾಕಿಂಗ್ ತನ್ನ ಗಾಲಿ ಖುರ್ಚಿಯಿಂದ ಏಳುವಂತಿಲ್ಲ. ಹಾಗಿದ್ದರೂ ಕೊರಗದ ಆತ ನಿಜಕ್ಕೂ ಅದ್ಭುತ ಅಲ್ಲಲ್ಲ, ಪರಮಾಶ್ಚರ್ಯ!

~ ರಿಯಾಜ್ ಕಾಚ್‌ಗಲ್

'ಕೋಟಿ ವೃಕ್ಷ ಅಭಿಯಾನದ ಮಹತ್ವ' - ಪ್ರಬಂಧ ಸ್ಪರ್ಧೆ:'ಕೋಟಿ ವೃಕ್ಷ ಅಭಿಯಾನ' ವಿಜಯಪುರದಲ್ಲಿ ಹಸಿರು ಕ್ರಾಂತಿ ಸೃಷ್ಟಿಸಲು ರಾಜ್ಯ ಜಲ ಸಂಪನ್ಮೂಲ ಸ...
28/06/2017

'ಕೋಟಿ ವೃಕ್ಷ ಅಭಿಯಾನದ ಮಹತ್ವ' - ಪ್ರಬಂಧ ಸ್ಪರ್ಧೆ:

'ಕೋಟಿ ವೃಕ್ಷ ಅಭಿಯಾನ' ವಿಜಯಪುರದಲ್ಲಿ ಹಸಿರು ಕ್ರಾಂತಿ ಸೃಷ್ಟಿಸಲು ರಾಜ್ಯ ಜಲ ಸಂಪನ್ಮೂಲ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲರು ತೆಗೆದುಕೊಂಡಿರುವ ಒಂದು ಮಹತ್ವದ ಹೆಜ್ಜೆ. ವಿಜಯಪುರದ ಇತಿಹಾಸದಲ್ಲಿಯೇ ಇಂತಹದೊಂದು ಕ್ರಮ ಮೊಟ್ಟಮೊದಲದ್ದಾಗಿದೆ. ಈ ಅಭಿಯಾನವು ಐದು ವರ್ಷಗಳಲ್ಲಿ ಒಂದು ಕೋಟಿ ಸಸಿಗಳನ್ನು ವಿಜಯಪುರದಲ್ಲಿ ನೆಡುವ ಹಾಗೂ ಅವುಗಳನ್ನು ಸಂರಕ್ಷಿಸುವ ಚಟುವಟಿಕೆಗಳನ್ನೊಳಗೊಂಡಿರುತ್ತದೆ.

ಈ ಅಭಿಯಾನದ ಅವಶ್ಯಕತೆ ಹಾಗೂ ಮಹತ್ವದ ಬಗ್ಗೆ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲಾ ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಯಾ ಶಾಲೆಗಳ ಆವರಣದಲ್ಲಿ 'ಒಂದು ಕೋಟಿ ವೃಕ್ಷ ಅಭಿಯಾನದ ಮಹತ್ವ' ಎಂಬ ವಿಷಯದ ಬಗ್ಗೆ ಜೂನ್ 30, 2017, ರಂದು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಪ್ರವೇಶ ನಮೂನೆಗಳನ್ನು [email protected] ಗೆ ಜುಲೈ 5, 2017, ರೊಳಗೆ ಕಳುಹಿಸಬೇಕು. ಒಂದನೇ ತರಗತಿಯಿಂದ ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ವಿಜೇತರಿಗೆ ಮಾನ್ಯ ಸಚಿವರಾದ ಡಾ. ಎಂ. ಬಿ. ಪಾಟೀಲರೊಂದಿಗೆ ಉಪಹಾರ ಸೇವಿಸುವ ಹಾಗೂ ಅವರಿಂದ ಆಕರ್ಷಕ ಬಹುಮಾನಗಳನ್ನು ಸ್ವೀಕರಿಸುವ ಅವಕಾಶ ಲಭ್ಯವಾಗುತ್ತದೆ.

First time in the History of vijayapur...Get ready...Dirt track racing is organising in vijayapur..Event will be announc...
07/05/2017

First time in the History of vijayapur...
Get ready...
Dirt track racing is organising in vijayapur..
Event will be announced very shortly in this page... Wait...



Mob no .Praveen-9886664396
sangamesh-8762089637
pramodkumar-9731316664

ಮಹಾ ಶಿವರಾತ್ರಿ ಶುಭಾಶಯಗಳು .ಇಂತಿ ನಿಮ್ಮ ಪ್ರೀತಿಯ  #ಪಮ್ಮು.
24/02/2017

ಮಹಾ ಶಿವರಾತ್ರಿ ಶುಭಾಶಯಗಳು .

ಇಂತಿ ನಿಮ್ಮ ಪ್ರೀತಿಯ #ಪಮ್ಮು.

ಕನ್ನಡದಲ್ಲಿ ಓದುಗರನ್ನು ಬೆಳೆಸಿ, ಅದರೊಂದಿಗೆ ತಾನೂ ಬೆಳೆದ ಅಪರೂಪದ ಆತ್ಮೀಯ ಪತ್ರಿಕೆ ನಮ್ಮ 'ನಿಮ್ಮೆಲ್ಲರ ಮಾನಸ'. ಓದುಗರಾದ ನಮ್ಮ ಬದುಕಿಗೆ ಎಷ್...
27/10/2016

ಕನ್ನಡದಲ್ಲಿ ಓದುಗರನ್ನು ಬೆಳೆಸಿ, ಅದರೊಂದಿಗೆ ತಾನೂ ಬೆಳೆದ ಅಪರೂಪದ ಆತ್ಮೀಯ ಪತ್ರಿಕೆ ನಮ್ಮ 'ನಿಮ್ಮೆಲ್ಲರ ಮಾನಸ'. ಓದುಗರಾದ ನಮ್ಮ ಬದುಕಿಗೆ ಎಷ್ಟೆಲ್ಲವನ್ನೂ ನೀಡಿದ ಈ ಪತ್ರಿಕೆಗೆ ನಾವೇನು ನೀಡಿದ್ದೇವೆ ಎಂದಾಗ ಆರಂಭವಾಗಿದ್ದೇ ಈ ಅಪರೂಪದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ದಯವಿಟ್ಟು ಎಲ್ಲರೂ ಬನ್ನಿ. ಅವತ್ತು ಮಾನಸದ ಓದುಗರು ಒಂದೆಡೆ ಸೇರುವ ಖುಷಿಯಾದರೆ, ಅದರೊಂದಿಗೆ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ನಮ್ಮ ಕನಸಿನ ಮನ್ವಂತರ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಗೆ ಅಧಿಕೃತ ಚಾಲನೆ ದೊರಕಲಿದೆ. ಸ್ನೇಹಿತರೇ ಬಿಡುವು ಮಾಡಿಕೊಂಡು ಬನ್ನಿ. ನಿಮ್ಮೆಲ್ಲರ ನಿರೀಕ್ಷೆಯಲ್ಲಿ ನಾವಿರುತ್ತೇವೆ.

01/07/2016
ಶುಭ ರಾತ್ರಿ
30/06/2016

ಶುಭ ರಾತ್ರಿ

good morning
16/06/2015

good morning

Address

SOLAPUR Road
Vijayapur
586101

Telephone

9731316664

Website

Alerts

Be the first to know and let us send you an email when ನಾನು ನನ್ನ ಕನಸು posts news and promotions. Your email address will not be used for any other purpose, and you can unsubscribe at any time.

Share